ಎಲ್ಲರ ಕಣ್ಣು ಮೇ 12ರ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ

ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶ 2011 ಪ್ರಕಟ
ಮೇ 12ರಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಸಲಾಗುತ್ತಿರುವ ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಈ ಫಲಿತಾಂಶ ಸಂಜೆ ಸರಿಯಾಗಿ 6 ಗಂಟೆಗೆ ದಟ್ಸ್ ಕನ್ನಡ ವೆಬ್ ತಾಣದಲ್ಲಿ ಲಭ್ಯವಾಗಲಿದೆ.
ಫಲಿತಾಂಶ ಬರುತ್ತಿದ್ದಂತೆ ವಿದ್ಯಾರ್ಥಿಗಳಿಗೆ ತತ್ ಕ್ಷಣ ಫ್ಲಾಷ್ ನ್ಯೂಸ್ ಲೆಟರ್ ಮುಖಾಂತರ ತಿಳಿಸುವ ಉದ್ದೇಶದಿಂದ ಆಸಕ್ತ ವೆಬ್ಬಿಗರ ಈ-ಮೇಲ್ ಐಡಿಗಳನ್ನು ನಾವು ಸಂಗ್ರಹಿಸುತ್ತಿದ್ದೇವೆ. ಈಗಾಗಲೆ ಸಾವಿರಾರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ತಮ್ಮ ಈ-ಮೇಲ್ ಐಡಿಯನ್ನು ನಮೂದಿಸಿದ್ದಾರೆ. ಎಲ್ಲಿ ಈ-ಮೇಲ್ ಐಡಿಯನ್ನು ನೀಡಬೇಕೆಂಬುದು ತಿಳಿಯಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ.
ಈ ವರ್ಷ 8.73 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಏ. 1ರಿಂದ ಪ್ರಾರಂಭವಾಗಿದ್ದ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮೇ ಮೊದಲ ವಾರದಲ್ಲಿ ಮುಗಿದಿತ್ತು. ಮೇ 15ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಿದ್ದ ಕಾಗೇರಿಯವರು ಮೇ 12ರಂದೇ ಫಲಿತಾಂಶ ನೀಡುತ್ತಿದ್ದಾರೆ.
ಕಳೆದ ವರ್ಷ ಕೂಡ ಬಾಲಿಕೆಯರೇ ಮೇಲುಗೈ ಸಾಧಿಸಿದ್ದರೆಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಒಟ್ಟು ಶೇ.68.77ರಷ್ಟು ಫಲಿತಾಂಶ ಹೊರಬಿದ್ದಿತ್ತು. ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಉಡುಪಿ ಮತ್ತು ಎರಡನೇ ಸ್ಥಾನದಲ್ಲಿರುವ ಮಂಗಳೂರು, ಕಳೆದ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಮೊದಲ ಎರಡು ಸ್ಥಾನವನ್ನೂ ಗಳಿಸಿರಲಿಲ್ಲ. 2010ರಲ್ಲಿ ಚಿಕ್ಕೋಡಿ ಅಗ್ರಸ್ಥಾನಕ್ಕೇರಿದ್ದರೆ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದವು. ಬೀದರ್ ಜಿಲ್ಲೆ ಕೊನೆಯ ಸ್ಥಾನದಲ್ಲಿತ್ತು.












Click it and Unblock the Notifications