ಗೋಪುರಕ್ಕೆ ತೈಲಾಭಿಷೇಕ ಮಾಡುವ ವಿಶಿಷ್ಟ ಆಚರಣೆ

Ujjini Shikara Thailabhisheka
ಬಳ್ಳಾರಿ, ಮೇ. 10 : ಉಜ್ಜಯಿನಿ ಶ್ರೀ ಮರುಳಾರಾಧ್ಯ ಪೀಠದ ವಿಶಿಷ್ಟ ಆಚರಣೆ ಆಗಿರುವ ಸ್ವಾಮಿಯ ಗೋಪುರದ ಶಿಖರಕ್ಕೆ ತೈಲಾಭಿಷೇಕ ಮಾಡುವ ಸಂಪ್ರದಾಯದ ಉತ್ಸವ ಸೋಮವಾರ ಸಂಜೆ ಅದ್ದೂರಿಯಾಗಿ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಯಿನಿಯಲ್ಲಿ ನಡೆಯುವ ಈ ವಿಶಿಷ್ಟ ಉತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.

ಜಗದ್ಗುರು ಶ್ರೀ ಮರುಳಸಿದ್ಧ ರಾಜ ದೇಶೀಕೇಂದ್ರ ಸ್ವಾಮಿಗಳ ಸಮ್ಮುಖದಲ್ಲಿ ನಡೆದ ಈ ಉತ್ಸವದಲ್ಲಿ ಲಕ್ಷಾಂತರ ಭಕ್ತ ಸಮೂಹ ಹಾಗೂ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಅತ್ಯಂತ ಉತ್ಸಾಹ, ಹುಮ್ಮಸ್ಸಿನಿಂದ ಪಾಲ್ಗೊಂಡು ವಿಜೃಂಭಿಸಿದರು. ತೈಲಾಭಿಷೇಕದ ಈ ವಿಶಿಷ್ಟ ಆಚರಣೆಯನ್ನು ಕಂಡು ರೋಮಾಂಚಿತಗೊಂಡು ಸಂಭ್ರಮಿಸಿದರು.

ಪ್ರತಿವರ್ಷ ವೈಶಾಖ ಶುದ್ಧ ಷಷ್ಠಿಯಂದು ನಡೆಯುವ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕವು ದಕ್ಷಿಣ ಭಾರತದಲ್ಲಿಯೇ ವಿಶೇಷವಾಗಿದೆ. ಜರಿಮಲೆಯ ಪಾಳೆಗಾರರ ವಂಶಸ್ಥರು ಪ್ರತಿವರ್ಷವೂ ಶಿಖರದ ತೈಲಾಭಿಷೇಕಕ್ಕೆ ತೈಲವನ್ನು ಕಳಿಸುವುದು ಸಂಪ್ರದಾಯ. ಅವರ ಕಳಿಸಿದ ತೈಲವನ್ನು ಮೊದಲಿಗೆ ಸ್ವಾಮಿಯ ಶಿಖರಕ್ಕೆ ಮೊದಲು ಎರೆದ ನಂತರ ಉಳಿದ ಭಕ್ತರ ತೈಲವನ್ನು ಶಿಖರಕ್ಕೆ ಎರೆಯಲಾಗುವುದು.

ಶ್ರೀಪೀಠದ ರಾಜಗೋಪುರದ ಶಿಖರದ ಮೇಲಿನಿಂದ ತೈಲವನ್ನು ಅಭ್ಯಂಜನದ ರೀತಿಯಲ್ಲಿ ಎರೆಯುವ ದೃಶ್ಯ ರೋಮಾಂಚಕಾರಿ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಈ ದೃಶ್ಯವನ್ನು ಕಂಡು ರೋಮಾಂಚಿತಗೊಂಡರು.

ಇದೇ ಸಂದರ್ಭದಲ್ಲಿ ನೆರೆದ ಭಕ್ತ ಸಮೂಹ ಬಾಳೆಹಣ್ಣನ್ನೂ ತೂರಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತಾದರೂ, ಲಕ್ಷಾಂತರ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸ್‌ರು ಹರಸಾಹಸ ಮಾಡಬೇಕಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+