ಮೈಸೂರು: ಅಂಧರು ಹೇಳಿದಂತೆ ಕಾರು ಓಡಿಸಿದರು!

ಅಂಧರು ಹೇಳಿದಂತೆ ಕಾರು ಓಡಿಸಿದರು!
ಮೈಸೂರು, ಮೇ 9: ನಗರದಲ್ಲಿ ನಿನ್ನೆ ವಿಶೇಷ ಕಾರು ರಾಲಿ ನಡೆಯಿತು. ಇಲ್ಲಿ ವಿಶೇಷ ಏನೆಂದರೆ ಕಾರು ರಾಲಿಯಲ್ಲಿ ಚಾಲಕರಿಗೆ ಅಂಧರು ಮಾರ್ಗದರ್ಶಕರಾಗಿದ್ದರು. "ಅಂಧರ ನೆರವಿನಿಂದ ಕಾರು ಚಲಾಯಿಸಿ" ಎಂಬ ರಾಲಿಯನ್ನು ಮೈಸೂರುರಾಲಿಡಾಟ್ಕಾಮ್ ಮತ್ತು ಅಂಧರ ರಾಷ್ಟ್ರೀಯ ಒಕ್ಕೂಟ(ಎನ್ಎಫ್ ಬಿ) ಜಂಟಿಯಾಗಿ ಆಯೋಜಿಸಿತ್ತು.

ಮೈಸೂರಿನಲ್ಲಿ ಇಂತಹ ಕಾರು ರಾಲಿ ನಡೆದಿರುವುದು ಇದೇ ಮೊದಲು. 6 ಅಡಿ ಉದ್ದದ ಸೈಕಪ್ ಪ್ಯೂರ್ ಅಗರಬತ್ತಿ ಉರಿಸುವ ಮೂಲಕ ಎನ್ಎಎಫ್ ಬಿ ಅಧ್ಯಕ್ಷ ಸಿದ್ದರಾಜು ಈ ರಾಲಿಯನ್ನು ಉದ್ಘಾಟಿಸಿದರು. ಈ ಕಾರು ರಾಲಿಯಲ್ಲಿ ನೂರಾರು ಜನರು ಭಾಗವಹಿಸಿ ಅಂಧರ ಸಮುದಾಯಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಹನ್ನೆರಡಕ್ಕೂ ಹೆಚ್ಚು ಜನರು ಅಂಧರ ಮಾರ್ಗದರ್ಶನದ ಮೂಲಕ ಕಾರು ಚಲಾಯಿಸಿದ್ದಾರೆ. ಈ ಅಂಧರಿಗೆ ಬ್ರೈಲ್ ಲಿಪಿಯ ಮೂಲಕ ನ್ಯಾಷನಲ್ ಸ್ಕೂಲ್ ಆಫ್ ಬ್ಲೈಂಡ್ ತರಬೇತಿ ನೀಡಿತ್ತು.

ಇದನ್ನೂ ಓದಿ: ಇನ್ಮುಂದೆ ಅಂಧರೂ ದಟ್ಸ್ ಕನ್ನಡ ಓದಬಹುದು!

ಇಲ್ಲಿ ಅಂಧರು ಬ್ರೈಲ್ ಲಿಪಿಯಲ್ಲಿರುವ ರೂಟ್ ಮ್ಯಾಪ್ ಮೂಲಕ ಚಾಲಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. "ಈ ಕಾರ್ಯಕ್ರಮಗಳು ಅಂಧರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ನೆರವಾಗಿದೆ. ತಮ್ಮ ಅಂಧತೆಯ ನಡುವೆಯು ಇವರು ಸಾಕಷ್ಟು ಸಾಧಿಸಬಲ್ಲರು ಎಂಬುದಕ್ಕೆ ಇದು ಸಣ್ಣ ನಿದರ್ಶನವಾಗಿದೆ" ಎಂದು ಕಾರ್ಯಕ್ರಮದ ಸಂಘಟಕ ಅರ್ಜುನ್ ರಂಗ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+