ಮಂಗಳೂರಿನಲ್ಲಿ ಕ್ರಿಶ್ಚಿಯನರಿಂದ ಕ್ರಿಶ್ಚಿಯನರಿಗೇ ಟೋಪಿ

ಗೋರಿ ಇರುವ ಸ್ಥಳದ ಮಾರಾಟ ಮಾಡುವುದು ಒಂದು ವ್ಯವಹಾರವಾಗಿದೆ. ಅಲ್ಲದೆ, ಸತ್ತ ದೇಹವನ್ನು ಸ್ವರ್ಗಕ್ಕೆ ಕಳುಹಿಸುತ್ತೇವೆಂದು ಹೇಳುವುದರ ಮೂಲಕ ಮುಗ್ಧ ಜನರಿಗೆ ಟೋಪಿ ಹಾಕಲಾಗುತ್ತಿದೆ. ಅಂತ್ಯಕ್ರಿಯೆಯ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ನಾಲ್ಕು ಪಟ್ಟು ಶುಲ್ಕ ಕೀಳಲಾಗುತ್ತಿದೆ. ಸರಕಾರವು ಗೋರಿಗಳನ್ನು ಉಚಿತವಾಗಿ ಹಂಚಿಕೆ ಮಾಡಿದೆ. ಅದನ್ನು ಮಾರಾಟ, ಬಾಡಿಗೆ, ಲೀಸ್ ಗೆ ನೀಡುವಂತಿಲ್ಲ. ಆದರೆ ಪಾದ್ರಿಗಳು ಇದರಲ್ಲಿಯೂ ಅವ್ಯವಹಾರ ನಡೆಸುತ್ತಾರೆ. ಇಂತಹ ಗೋರಿಗಳನ್ನು ಒಂದರಿಂದ ಎರಡು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶೇಕಡ 2 ರಷ್ಟಿರುವ ಪಾದ್ರಿಗಳು ಶೇಕಡಾ 98ರಷ್ಟು ಕ್ರಿಶ್ಚಿಯನ್ ಧರ್ಮೀಯರನ್ನು ದೋಚುತ್ತಿದ್ದಾರೆ. ಚರ್ಚ್ ಗಳಲ್ಲಿ ಪಾದ್ರಿಗಳೇ ಸರ್ವಾಧಿಕಾರಿಗಳಾಗುತ್ತಿದ್ದಾರೆ. ಪಾದ್ರಿಗಳು ಈ ರೀತಿ ಜನರ ಸಂಪತ್ತು ಮತ್ತು ಹಣಕ್ಕೆ ಕೈಹಾಕುವುದನ್ನು ಯಾರು ಕೂಡ ಒಪ್ಪಲು ಸಾಧ್ಯವಿಲ್ಲ. ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯಾವುದೇ ದಾರಿಗಳು ಕಾಣುತ್ತಿಲ್ಲ ಎಂದು ಪಿ ಬಿ ಡಿಸಾ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿಷಾದ ವ್ಯಕ್ತಪಡಿಸಿದರು
ಮಂಗಳೂರು ಬಿಷಪ್ ರು ನಿರ್ಮಿಸಿದ ಹೊಸ ಸಂವಿಧಾನದಲ್ಲಿ ಬಿಷಪ್ ರಿಗೆ ಚಕ್ರಾಧಿಪತ್ಯ ನೀಡಲಾಗಿದೆ. "ಎಲ್ಲ ಜನರನ್ನು ಒಂದೇ ತೆರನಾಗಿ ನೋಡುವ ಪ್ರಜಾಪ್ರಭುತ್ವ ಇರುವ ಸಂವಿಧಾನ ನಮಗೆ ಬೇಕು" ಎಂದು ಅವರು ಬೇಡಿಕೆಯನ್ನಿಟ್ಟರು. ಐಸಿಎಸ್ಎ ಮತ್ತು ಕ್ರಿಶ್ಚಿಯನ್ ರಿಫಾರ್ಮ್ಸ್ ಫೌಂಡೇಷನ್ ರಾಷ್ಟ್ರೀಯ ಮಟ್ಟದಲ್ಲಿ ಒಂದು ನೆಟ್ ವರ್ಕ್ ಸ್ಥಾಪಿಸಲಿದೆ. ಈ ಕುರಿತು ಮಂಗಳೂರಿನಲ್ಲಿ ಮೇ 8ರಂದು ಸಭೆಯೊಂದು ನಡೆಯಲಿದ್ದು ಮಂಗಳೂರು, ಮುಂಬೈ ಮತ್ತು ಬೆಂಗಳೂರಿನ ಸುಮಾರು 60 ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications