ಶಿಕಾರಿಪುರದಲ್ಲಿ ನರಹಂತಕ ಹುಲಿಗೆ ಒಬ್ಬ ಬಲಿ

ಈಸೂರಿನ ಮುನೀರ್ ಸಾಬ್(35) ಎಂಬುವವರೇ ಹುಲಿ ದಾಳಿಗೆ ಬಲಿಯಾದ ನತದೃಷ್ಟ.ಬಾಲಕರಾದ ರಘು ಹಾಗೂ ನಾಗರಾಜ್ ಎಂಬಿಬ್ಬರು ಹುಲಿ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ. ಈಸೂರು ಹಾಗೂ ಗಾಮಾ ಹಳ್ಳಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹುಲಿಯನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ಹುಲಿಯನ್ನು ಬಲೆಗೆ ಕೆಡವಲು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಗ್ರಾಮಸ್ಥರು ಕೈಜೋಡಿಸಿದ್ದಾರೆ. ಆದರೆ ಹುಲಿರಾಯ ಮಾತ್ರ ಬಲಗೆ ಬೀಳದೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಇದೇ ಮೊದಲ ಬಾರಿಗೆ ಹುಲಿ ಗ್ರಾಮಸ್ಥರಿಗೆ ಮುಖಾಮುಖಿಯಾಗುವ ಮೂಲಕ ಈಸೂರು ಗ್ರಾಮಸ್ಥರನ್ನು ಭಯಬೀತಗೊಳಿಸಿದೆ.
ಹುಲಿ ದಾಳಿಯಿಂದ ಗಾಯಗೊಂಡವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಸೂರಿನ ಬಾಳೆತೋಟದವೊಂದರಲ್ಲಿ ಹುಲಿರಾಯ ಸೇರಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಶಿಕಾರಿಪುರದಲ್ಲಿ ಹುಲಿ ಭೇಟೆ ಸತತವಾಗಿ ನಡೆಯುತ್ತಿದೆ. ಆದರೆ ಹುಲಿ ಮಾತ್ರ ಬಲೆಗೆ ಬೀಳುತ್ತಿಲ್ಲ. ಕಾರ್ಯಚಾರಣೆ ಮುಂದುವರಿದಿದೆ.












Click it and Unblock the Notifications