ಯಡ್ಡಿ ಭೂಹಗರಣ: ಅರ್ಜಿ ತಳ್ಳಿಹಾಕಿದ ಸುಪ್ರಿಂ ಕೋರ್ಟ್
ನವದೆಹಲಿ:
ಮುಖ್ಯಮಂತ್ರಿ ಬಿ. ಎಸ್. ಯಡ್ಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ಧ ಭೂಹಗರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸುವ ಕುರಿತಾದ ಅರ್ಜಿಯನ್ನು ಸುಪ್ರಿಂ ಕೋರ್ಟ್ ಇಂದು ತಳ್ಳಿಹಾಕಿದ್ದು, ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಗೆ ಸೂಚಿಸಿದೆ. id="toptextpromo">ನ್ಯಾಯಮೂರ್ತಿ
ವಿ. ಎಸ್. ಸರ್ಪುಕರ್ ಮತ್ತು ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಅವರ ವಿಭಾಗೀಯ ಪೀಠವು ಅರ್ಜಿದಾರರಾದ ಅಡ್ವೊಕೇಟ್ ಸಿರಾಜಿನ್ ಬಾಷಾ ಅವರಿಗೆ ಈ ಪ್ರಕರಣವನ್ನು ಹೈಕೋರ್ಟಿನಲ್ಲೇ 6 ವಾರದೊಳಗೆ ತೀರ್ಮಾನಿಸಿಕೊಳ್ಳಿರಿ ಎಂದಿದೆ. ಯಡ್ಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಭೂಹಗರಣ ಪ್ರಕರಣದಲ್ಲಿ ತೊಡಗಿರುವುಕ್ಕಾಗಿ ಕರ್ನಾಟಕ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರು ಇವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>ಭ್ರಷ್ಟಾಚಾರ
ಕಾಯಿದೆಯ ಅಡಿಯಲ್ಲಿ ಬಾಷಾ ಸೇರಿದಂತೆ ಇಬ್ಬರು ನ್ಯಾಯವಾದಿಗಳು ಈ ಪ್ರಕರಣವನ್ನು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಮುಂದಾಗಿದ್ದರು. ಆದರೆ ಇದನ್ನು ಯಡಿಯೂರಪ್ಪ ಕುಟುಂಬದ ಸದಸ್ಯರೊಬ್ಬರು ಹೈಕೋರ್ಟಿನಲ್ಲಿ ಪ್ರಶ್ನಿಸಿ ಸ್ಟೇ ಆರ್ಡರ್ ತಂದಿದ್ದರು. ಇದರಿಂದಾಗಿ ಬಾಷಾ ಅವರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು. ಈಗ ಈ ಪ್ರಕರಣವನ್ನು ಹೈಕೋರ್ಟಿನಲ್ಲಿಯೇ ವಿಚಾರಣೆ ನಡೆಸಿ ಎಂದು ಬಾಷಾ ಅರ್ಜಿಯನ್ನು ತಳ್ಳಿ ಹಾಕಿದೆ.











Click it and Unblock the Notifications