ಸಿಎಂ ಬುಡಮೇಲು ಮಾಡಲು ಮತ್ತೆ ಪಾದಯಾತ್ರೆ: ಸಿದ್ದು

Siddaramaiah hints another Padayatra
ಹುಬ್ಬಳ್ಳಿ, ಏ.20: ಅಕ್ರಮ ಗಣಿಗಾರಿಕೆಯಲ್ಲಿ ಕರ್ನಾಟಕ ದೇಶಕ್ಕೆ ನಂ.1 ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಸಿಇಸಿ ವರದಿಯಂತೆ ಗಣಿ ಲೈಸನ್ಸ್ ರದ್ದು ಮಾಡುತ್ತೇವೆ ಎನ್ನುತ್ತಾರೆ. ಆದರೆ, ಅಕ್ರಮ ಗಣಿಗಾರಿಕೆ ಲಾಭ ಪಡೆಯುತ್ತಿರುವ ಯಡಿಯೂರಪ್ಪ ಅವರ ಕುಟುಂಬದ ಟ್ರಸ್ಟ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಜನತೆಗೆ ಕಣ್ಣೊರೆಸುವ ಹೇಳಿಕೆ ನೀಡುವುದೇ ಕಾಯಕ ಮಾಡಿಕೊಂಡಿರುವ ಭಂಡ ಮುಖ್ಯಮಂತ್ರಿ ಕೆಳಗಿಳಿಸಲು ಕರ್ನಾಟಕ ಕಾಂಗ್ರೆಸ್ ಮತ್ತೆ ಪಾದಯಾತ್ರೆ ಕೈಗೊಳ್ಳುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇದಕ್ಕೂ ಮುನ್ನ ಕೆಪಿಸಿಸಿಯ ನೂತನ ಪದಾಧಿಕಾರಿಗಳು, ಸ್ಥಾನವಂಚಿತ ಹಳೆ ನಾಯಕರು ಸೇರಿದಂತೆ ಅನೇಕ ಕಾರ್ಯಕರ್ತರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಆದ್ದೂರಿಯಾಗಿ ಸ್ವಾಗತಿಸಿದರು. ವಿಶೇಷ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ರಾಹುಲ್, ನಂತರ ಬಿಜಾಪುರದ ಬಿಎಲ್ ಡಿಐ ಕಾಲೇಜು ಮೈದಾನಕ್ಕೆ ತೆರಳಿದರು.ಮತ್ತೆ ಹುಬ್ಬಳ್ಳಿಗೆ ಆಗಮಿಸಿ ಮಂಗಳೂರು ತೆರಳಿ ಅಂಬಲಪಾಡಿಯಲ್ಲಿ ಯುವ ಕಾಂಗ್ರೆಸ್ ಸದಸ್ಯರೊಂದಿಗೆ ಸಂವಾದ ನಡೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 5 ಸಾವಿರ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ನಡೆಸುತ್ತಿದ್ದಾರೆ.

ಬ್ಯಾಕ್ ಟು ಸಿದ್ದು: ವೀರಶೈವ ಸಮಾವೇಶದಲ್ಲೂ ರಾಜಕೀಯ ಮೆರೆದ ಯಡಿಯೂರಪ್ಪ, ಜಾತಿ ರಾಜಕಾರಣ ಮಾಡುತ್ತಾ, ವೀರಶೈವ ಓಟುಗಳನ್ನು ಹೈಜಾಕ್ ಮಾಡಿದ್ದಾರೆ. ಕುರ್ಚಿಗಾಗಿ ಮಠಾಧೀಶರ ಕಾಲು ಹಿಡಿಯುವ ಯಡಿಯೂರಪ್ಪ, ಮಠಗಳ ಪಾವಿತ್ರ್ಯತೆತನ್ನು ಹಾಳುಗೆಡವಿದ್ದಾರೆ. ಈ ಹಿಂದೆ ಇದ್ದ ಲಿಂಗಾಯತ ಮುಖ್ಯಮಂತ್ರಿಗಳಲ್ಲಿ ಯಾರು ಈ ಪಾಟಿ ಮಠ, ಮಂದಿರ ಸುತ್ತಿದ್ದು ಕಂಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಹುಲ್ ಕಿವಿಮಾತು: ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರು ಐಟಿ ಸಿಟಿಯಾಗಿ ವಿಶ್ವಖ್ಯಾತಿ ಗಳಿಸಿತು. ಈಗ ಬಿಜೆಪಿ ಸರ್ಕಾರ ಬಂದ ಮೇಲೆ ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎನಿಸಿದೆ. ಯುವ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ವಿರುದ್ಧ ಅಭಿಯಾನ ಕೈಗೊಳ್ಳಲಿ, ಹಿರಿಯ ನಾಯಕರು ಅದಕ್ಕೆ ಸೂಕ್ತ ಮಾರ್ಗದರ್ಶನ ಮಾಡಲಿ ಎಂಬ ಕಿವಿಮಾತು ರಾಹುಲ್ ಗಾಂಧಿ ಮಟಮಟ ಮಧ್ಯಾಹ್ನ ಉಡುಪಿಯಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+