ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಅನಿಲ ಸಂಪರ್ಕ ಟೆಕ್ಕಿಗಳೂ ಕಾರಣ : ಶೋಭಾ

By Mahesh
|
Google Oneindia Kannada News

Minister Shobha
ಬೆಂಗಳೂರು, ಏ.19: ರಾಜ್ಯದಲ್ಲಿ ಎಗ್ಗಿಲ್ಲದೆ ನಡೆದಿರುವ ಅಕ್ರಮ ಅಡುಗೆ ಅನಿಲ ದಂಧೆಯನ್ನು ಮಟ್ಟ ಹಾಕಲು ಬೇಕಾದ ಅಗತ್ಯ ಕ್ರಮಗಳನ್ನು ತಕ್ಷಣವೆ ತೆಗೆದುಕೊಳ್ಳಲಾಗುವುದು. ಪ್ರಾಥಮಿಕ ವರದಿಯಂತೆ ಬೆಂಗಳೂರಿನಲ್ಲಿ ಸುಮಾರು 20 ಲಕ್ಷದಷ್ಟು ಅಕ್ರಮ ಅಡುಗೆ ಅನಿಲ ಸಂಪರ್ಕ ಹೊಂದಿರುವುದು ಪತ್ತೆಯಾಗಿದ್ದು, ಕೂಡಲೇ ಅದನ್ನು ರದ್ದುಪಡಿಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದ್ದಾರೆ. ಐಟಿ ಬಿಟಿ, ಶ್ರೀಮಂತ ವರ್ಗಕ್ಕೆ ಸುಲಭವಾಗಿ ಗ್ಯಾಸ್ ಸಂಪರ್ಕ ಸಿಗುತ್ತಿರುವ ಬಗ್ಗೆ ಇಲಾಖೆ ನಿಗಾವಹಿಸಿದೆ ಎಂದರು.

ರಾಜ್ಯದಲ್ಲಿ ಒಟ್ಟು 71.5 ಲಕ್ಷ ಅನಿಲ ಸಂಪರ್ಕ ಗ್ರಾಹಕರು ಪತ್ತೆಯಾಗಿದ್ದಾರೆ. ಇದರಲ್ಲಿ 20 ಲಕ್ಷ ಜನ ಅಕ್ರಮವಾಗಿ ಅಡುಗೆ ಅನಿಲ ಬಳಸುತ್ತಿದ್ದಾರೆ. ನಮ್ಮ ಅಧಿಕಾರಿಗಳು ಮನೆ ಮನೆಗೂ ಭೇಟಿ ನೀಡಿ ಅಕ್ರಮ ಸಂಪರ್ಕದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಂದಿನ ಒಂದು ವಾರದೊಳಗೆ ಅಕ್ರಮ ಅಡುಗೆ ಅನಿಲ ಬಳಸುತ್ತಿರುವವರ ಸಂಪೂರ್ಣ ಮಾಹಿತಿ ಲಭ್ಯವಾಗಲಿದ್ದು, ಅದನ್ನು ಆಧರಿಸಿ ಅಕ್ರಮ ಅಡುಗೆ ಸಂಪರ್ಕವನ್ನು ರದ್ದು ಪಡಿಸಲಾಗುವುದು
ಅರ್ಹ ಗ್ರಾಹಕರು ಹೊಸದಾಗಿ ಅಡುಗೆ ಅನಿಲ ಸಂಪರ್ಕ ಪಡೆದುಕೊಳ್ಳಬಹುದು ಎಂದರು.

ಐಟಿ ಬಿಟಿ ಮೇಲೆ ಕಿಡಿ: ಅಕ್ರಮ ಅಡುಗೆ ಅನಿಲ ಸಂಪರ್ಕಕ್ಕೆ ಗ್ಯಾಸ್ ಏಜೆನ್ಸಿಗಳು, ಅಧಿಕಾರಿಗಳು, ತೈಲ ಕಂಪೆನಿಗಳು ಕಾರಣ. ಕೇಂದ್ರ ಸರ್ಕಾರದ ಸಬ್ಸಿಡಿ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಜನ ಸಾಮಾನ್ಯರು ಗ್ಯಾಸ್ ಸಂಪರ್ಕ ಪಡೆಯಲು ವರ್ಷಾನುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ಐಟಿ ಬಿಟಿ ಉದ್ಯೋಗಿಗಳು ಅಗತ್ಯಕ್ಕಿಂತ ಹೆಚ್ಚಿನ ಹಣ ತೆತ್ತು ಅಕ್ರಮವಾಗಿ ಗ್ಯಾಸ್ ಸಂಪರ್ಕ, ಹೆಚ್ಚುವರಿ ಸಿಲಿಂಡರ್ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಶೋಭಾ ಹೇಳಿದರು.

English summary
Over 20 lakh consumers in Bangalore having illegal LPG connection face axe as Karnataka Food and Civil Supplies Department Minister Shobha Karandlaje said illegal connections to be canceled soon. IT BT employees are paying more and getting illegal LPG connection easily, it will be stopped she said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X