• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಕಲ್ ರೇಪ್ ಮಾಡ್ತಾ ಇದ್ರೆ ಅಮ್ಮ ನೋಡ್ತಾ ಇದ್ದಳು

By Mahesh
|

ಮುಂಬೈ, ಏ.15: ಹಣ ಹಾಗೂ ಮದ್ಯದ ಆಸೆಯಿಂದ ರಕ್ಕಸಿ ತಾಯಿಯೊಬ್ಬಳು ಕಳೆದ ಎರಡು ವರ್ಷಗಳಿಂದ ತನ್ನ 15ರ ಹರೆಯದ ಪುತ್ರಿಯನ್ನೇ ಮೈಮಾರಿ ಹಣಗಳಿಸುವಂತೆ ಬಲಾತ್ಕರಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತನ್ನ ಗೆಳೆಯ ಮತ್ತು ಇತರ ಗಿರಾಕಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಲು ಬಲವಂತ ಮಾಡಿದ ಅಮಾನವೀಯ ಘಟನೆ ಇಲ್ಲಿನ ಮಲಾಡಿನಲ್ಲಿ ನಡೆದಿದೆ.

ಖಜಾಬಿ ಬಾನು ಎಂಬಾಕೆಯೇ ತನ್ನ ಪುತ್ರಿ ರೆಹನಾಳನ್ನು (ಹೆಸರು ಬದಲಿಸಲಾಗಿದೆ) ವೇಶ್ಯಾವಾಟಿಕೆಗೆ ತಳ್ಳಿದ ಆರೋಪಿ ತಾಯಿ. ಆಕೆ ಕುರಾರ್ ಗ್ರಾಮದಲ್ಲಿ ಕ್ಯಾಟರಿಂಗ್ ನಡೆಸುತ್ತಿದ್ದಾಳೆ. ಮಗಳು ರಬ್ಬರ್ ಫ್ಯಾಕ್ಟರಿಯೊಂದರಲ್ಲಿ ಎರಡು ವರ್ಷಗಳಿಂದ ದುಡಿದು ಸುಸ್ತಾಗಿ ಬಂದ ಮೇಲೆ, ಗಿರಾಕಿಗಳನ್ನು ಕುದುರಿಸುವ ತಾಯಿ, ಮಗಳನ್ನು ಪಾಪಕೂಪಕ್ಕೆ ತಳ್ಳುತ್ತಿದ್ದಾಳೆ.

ಅಮ್ಮ ನಿನಗೆ ಹಣ ಬೇಕಾದರೆ ನಾನು ದುಡಿದು ತರುತ್ತೇನೆ. ಈ ರೀತಿ ಅಸಹ್ಯದ ಬದುಕು ಏತಕ್ಕೆ ಎಂದು ಮಗಳು ಎಷ್ಟು ಅಂಗಲಾಚಿ ಬೇಡಿಕೊಂಡರೂ ರಕ್ಕಸಿ ತಾಯಿ ಮನಸ್ಸು ಕರಗಿಲ್ಲ. ಮಗಳಿಗೆ ಬಾಸುಂಡೆ ಬರುವಂತೆ ಹೊಡೆದು ಬಡಿದು ಗಿರಾಕಿಗಳೆಡೆಗೆ ತಳ್ಳುತ್ತಿದ್ದಳಂತೆ ಆ ತಾಯಿ. ಹಣ ಹಾಗೂ ಮದ್ಯದ ಅಮಲು ಹತ್ತಿಸಿಕೊಂಡಿರುವ ತಾಯಿಗೆ ಮಗಳು ಮೈಮಾರಿ ಗಳಿಸುವ ಹಣದಿಂದ ಐಷಾರಮಿ ಬದುಕು ಬಾಳುವ ಬೃಹತ್ ಆಸೆಯಿದೆ.

ಗಂಡನಿಗೆ ಗೇಟ್ ಪಾಸ್ : ಪುತ್ರಿಯನ್ನು ವೇಶ್ಯಾವಾಟಿಕೆ ತಳ್ಳಿ ಹಣಗಳಿಸಲು ಆರಂಭಿಸಿದ ನಂತರ, ತನ್ನ ಗಂಡನನ್ನು ಮನೆಯಿಂದ ಹೊರದಬ್ಬಿದ ಬಾನು, ಮನೆಯನ್ನು ವೇಶ್ಯಾಗೃಹವನ್ನಾಗಿಸಿದ್ದಾಳೆ. 'ಅಂಕಲ್‌ ನನ್ನನ್ನು ರೇಪ್ ಮಾಡ್ತಾ ಇದ್ದರೆ ನಮ್ಮಮ್ಮ ಆನಂದದಿಂದ ನೋಡ್ತಾ ಇರ್ತಾ ಇದ್ದಳು. ರಾಜು ಅಂಕಲ್ ಮನೆಗೆ ಬಂದವರೆ ಬಲವಂತವಾಗಿ ನನ್ನ ಮೈಮೇಲಿನ ಬಟ್ಟೆ ಕಳಚಿಬಿಟ್ಟರು. ನಾನು ಎಷ್ಟು ಕೂಗಾಗಿ ಕಿರುಚಾಡಿದರೂ ಪ್ರಯೋಜನವಾಗಲಿಲ್ಲ. ನಂತರ ನಾನು ಕಾಯಿನ್ ಬಾಕ್ಸ್ ಮೂಲಕ ಮುಂಬೈಯ ಮಾಲ್ವಾನಿಯಲ್ಲಿರುವ ಚಿಕ್ಕಮ್ಮ ನಿಗೆ ಕರೆ ಮಾಡಿದೆ. ಅವರು ಬಂದು ನನ್ನನ್ನು ರಕ್ಷಿಸಿ ಮನೆಗೆ ಕರೆದೊಯ್ದರು" ಎಂದು ರೆಹನಾ ಕುರಾರ್ ಪೊಲೀಸರಿಗೆ ವಿವರಿಸಿದ್ದಾಳೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Monster Mother forced her own teenage daughter to have sex with strangers. All she wanted is to get her daughter into her prostitution and earn heavy money for her. Mother also enjoyed as her child was raped by strangers in Kurar village in Malad, Mumbai. Kurar and Malvani police have booked a case and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more