ಇನ್ಫಿ 4ನೇ ತ್ರೈಮಾಸಿಕ: ನಿರೀಕ್ಷಿತ ಲಾಭ ಸಿಕ್ಕಿಲ್ಲ

Infosys Q4 net profit up 13.7 per cent
ಬೆಂಗಳೂರು, ಏ.15: ದೇಶದ ಎರಡನೆ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಇಂದು ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರ್ಚ್ 31, 2011ಕ್ಕೆ ಕೊನೆಗೊಂಡ 4ನೇ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಒಟ್ಟಾರೆ ಶೇ.13.7 ರಷ್ಟು ಏರಿಕೆಯೊಂದಿಗೆ ರು. 1,818 ಕೋಟಿ ಲಾಭ ಗಳಿಸಿದೆ. ಆದರೆ, ಇದು ಪ್ರಸಕ್ತ ತ್ರೈಮಾಸಿಕ ಮಾರುಕಟ್ಟೆಯಲ್ಲಿ ನಿರೀಕ್ಷೆಗಿಂತ ಕೆಳ ಮಟ್ಟದ ಸಾಧನೆಯಾಗಿದೆ ಎಂದು ಇನ್ಫೋಸಿಸ್ ಹಣಕಾಸು ವಿಭಾಗದ ಮುಖ್ಯಸ್ಥ ವಿ ಬಾಲಕೃಷ್ಣನ್ ಹೇಳಿದ್ದಾರೆ.

ಇನ್ಫೋಸಿಸ್ ಬೋರ್ಡ್ ಗೆ ಎಚ್ ಆರ್ ಡಿ ಮುಖ್ಯಸ್ಥ ಟಿವಿ ಮೋಹನ್ ದಾಸ್ ಪೈ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಂಪೂರ್ಣ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ರು.5 ಮುಖಬೆಲೆಯ ಪ್ರತಿ ಷೇರಿನ ಮೇಲೆ ರು. 20ರ ಅಂತಿಮ ಲಾಭಾಂಶ ಘೋಷಿಸಿದೆ. 2009-10 ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ 1,600 ಕೋಟಿ ರು ಲಾಭಗಳಿಸಿತ್ತು.

ಈ ಬಾರಿ(ಪ್ರಸಕ್ತ ತ್ರೈಮಾಸಿಕ ಮಾರ್ಚ್ 31,2011ಕ್ಕೆ ಅನ್ವಯವಗುವಂತೆ) ಶೇ. 3.3 ರಿಂದ 6.7 ರಷ್ಟು ಏರಿಕೆಯೊಂದಿಗೆ 1,839.40 ಕೋಟಿ ರು ನಿಂದ 1,899.20 ಕೋಟಿ ರು ವರೆಗೆ ಲಾಭಂಶ ಗಳಿಸುವ ನಿರೀಕ್ಷೆಯನ್ನು ಮಾರುಕಟ್ಟೆ ವಿಶ್ಲೇಷಕರು ಹೊಂದಿದ್ದರು. ಆದರೆ, ಒಟ್ಟಾರೆ ಲಾಭಾಂಶದಲ್ಲಿ ಏರಿಕೆ ಕಂಡುಬಂದಿದ್ದರೂ, ನಿರೀಕ್ಷಿತ ಮಟ್ಟ ಮುಟ್ಟಿಲ್ಲ.

ಲಾಭ ಗಳಿಕೆ ವಿಂಗಡಣೆ, ನಿರೀಕ್ಷೆ: ಸಾಫ್ಟ್ ವೇರ್ ಸೇವೆ, ಉತ್ಪನ್ನ ಹಾಗೂ ವ್ಯವಹಾರಿಕ ಕ್ರಿಯೆಗಳಿಂದ ಶೇ.22ರಷ್ಟು ಏರಿಕೆ ಒಟ್ಟಾರೆ 7,250 ಕೋಟಿ ರು ಲಾಭ. ಕಳೆದ ವರ್ಷ ಇದೇ ಅವಧಿಯಲ್ಲಿ 5,944 ಕೋಟಿ ರು ಗಳಿಸಿತ್ತು.

ಪ್ರಸಕ್ತ ಆರ್ಥಿಕ ವರ್ಷ 2011-12 ರ ಅಂತ್ಯಕ್ಕೆ 31,727 ಕೋಟಿ ರು. ನಿಂದ 32,270 ಕೋಟಿ ರು ಆದಾಯ ಗಳಿಸುವ ನಿರೀಕ್ಷೆಯಿದೆ. ಸದ್ಯಕ್ಕೆ ಆದಾಯ ಗಳಿಕೆ 27,501 ಕೋಟಿ ರು ಆಸುಪಾಸಿನಲ್ಲಿದೆ. ಬಿಎಸ್ ಇ ಸೆನ್ಸೆಕ್ಸ್ ನಲ್ಲಿ ಇನ್ಫಿ ಷೇರುಗಳು ಶೇ. 7.38 ರಷ್ಟು ಕುಸಿತ ಕಂಡಿದೆ.

ಗೋಲ್ಡ್ ಮನ್ ಸಾಚ್ಸ್, ಬಿಟಿ ಸಮೂಹ ಹಾಗೂ ಬಿಪಿ ಪಿಎಲ್ಸಿ ಮುಂತಾದ ಗ್ರಾಹಕರನ್ನು ಸೇರಿ ಸುಮಾರು 34 ಹೊಸ ಗ್ರಾಹಕರನ್ನು ಪ್ರಸಕ್ತ ತ್ರೈಮಾಸಿಕದಲ್ಲಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಮಾರ್ಚ್ 31 ಕ್ಕೆ ಅನ್ವಯವಾಗುವಂತೆ ಸಂಸ್ಥೆಯಲ್ಲಿ 1,30,820 ಉದ್ಯೋಗಿಗಳಿದ್ದಾರೆ. ನಾಲ್ಕನೇ ತ್ರೈ ಮಾಸಿಕದಲ್ಲಿ ಸುಮಾರು 8,930 ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ವಿ ಗೋಪಾಲಕೃಷ್ಣನ್ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+