ನಟ ಸುದೀಪ್ ಚಿತ್ರಗಳ ನಿರ್ದೇಶಕನ ಬಂಧನ
ಬೆಂಗಳೂರು,
ಏಪ್ರಿಲ್ 13: ಖ್ಯಾತ ನಟ ಸುದೀಪ್ ಅವರ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದಿದ್ದ ಭರಮಸಾಗರದ ಯೋಗೀಶ್ ಅಲಿಯಾಸ್ ಪುನೀತ್ (26) ಎಂಬಾತನನ್ನು ಪಶ್ಚಿಮ ವಿಭಾಗದ ಪೊಲೀಸರು ಬೈಕ್ ಕಳವು ಆರೋಪದ ಮೇಲೆ ಬುಧವಾರ ಬಂಧಿಸಿದ್ದಾರೆ. ಸುದೀಪ್ ಅಭಿನಯದ 'ಕಿಚ್ಚ' ಸೇರಿದಂತೆ ಇತರೆ ಸಿನಿಮಾಗಳಿಗೆ ಯೋಗೀಶ್ ನಿರ್ದೇಶನ ನೀಡಿದ್ದಾನೆ. id="toptextpromo">ಯೋಗೀಶ್
ಜತೆಗೆ ಒಟ್ಟು 67 ಮಂದಿಯನ್ನು ಬಂಧಿಸಿರುವ ಪೊಲೀಸರು 178 ಪ್ರಕರಣಗಳನ್ನು ಪತ್ತೆ ಹಚ್ಚಿ 1 ಕೋಟಿ 68 ಲಕ್ಷ ರುಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ 2 ಕೆಜಿ 378 ಗ್ರಾಂ ಚಿನ್ನ, 27 ಕೆಜಿ ಬೆಳ್ಳಿ, 60 ಸಾವಿರ ನಗದು, 102 ದ್ವಿಚಕ್ರ ವಾಹನಗಳು, 4 ನಾಲ್ಕು ಚಕ್ರದ ವಾಹನಗಳು, 10 ತ್ರಿಚಕ್ರ ವಾಹನಗಳು, ನಾಲ್ಕು ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡಿದ್ದಾರೆ. 4 ಸುಲಿಗೆ, 5 ಸರ ಅಪಹರಣ, 29 ಕನ್ನ ಕಳವು ಸೇರಿದಂತೆ 178 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಆರೋಪಿಗಳು
ನಗರದ ಕಬ್ಬನ್ ಪಾರ್ಕ್, ಚಿಕ್ಕಪೇಟೆ, ಶೇಷಾದ್ರಿಪುರಂ, ಮಲ್ಲೇಶ್ವರಂ, ರಾಜಾಜಿನಗರ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದರು. ಅವುಗಳನ್ನು ಹಾಸನ, ಮಡ್ಯ ಮತ್ತು ತುಮಕೂರುಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಬಿದರಿ ಹೇಳಿದ್ದಾರೆ. ಚಿಕ್ಕಪೇಟೆ ಉಪವಿಭಾಗದ ಎಸಿಪಿ ಸೋಲಭೈರೇಶ್ವರಪ್ಪ, ಇನ್ಸ್ ಪೆಕ್ಟರ್ ಲೋಕೇಶ್ವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿದೆ.











Click it and Unblock the Notifications