ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಐಫೋನ್ 4 ತರಲಿರುವ ಭಾರ್ತಿ

By Mahesh
|
Google Oneindia Kannada News

Bharti Airtel iPhone 4 Launch
ಬೆಂಗಳೂರು, ಏ.12: ವಿಶ್ವಖ್ಯಾತಿ ಗಳಿಸಿರುವ ಆಪಲ್ ನ ನೆಚ್ಚಿನ ಉತ್ಪನ್ನ ಐಫೋನ್ 4 ರನ್ನು ಮುಂಬರುವ ತಿಂಗಳುಗಳಲ್ಲಿ ಭಾರತದಲ್ಲಿ ಪರಿಚಯಿಸಲಾಗುವುದು ಎಂದು ಅಗ್ರಗಣ್ಯ ಮೊಬೈಲ್ ಸಂಸ್ಥೆ ಭಾರ್ತಿ ಏರ್ ಟೆಲ್ ಸೋಮವಾರ ಹೇಳಿಕೆ ನೀಡಿದೆ.

ಜುಲೈ 2010ರ ವೇಳೆಗೆ ಪತ್ರಿಕಾಗೋಷ್ಠಿಯಲ್ಲಿ ವರ್ಷಾಂತ್ಯಕ್ಕೆ ಐಫೋನ್ 4 ಭಾರತಕ್ಕೆ ಬರಲಿದೆ ಎಂದು ಏರ್ ಟೆಲ್ ನ ಸಿಇಒ ಸಂಜಯ್ ಕಪೂರ್ ಭರವಸೆ ನೀಡಿದ್ದರು. ಆದರೆ, ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. 3ಜಿ ಸೌಲಭ್ಯ ಪರಿಚಯಿಸಿರುವ ಭಾರ್ತಿ ಏರ್ ಟೆಲ್ ಗೆ ಇನ್ನೂ ಮಾರುಕಟ್ಟೆಯಲ್ಲಿ ಹಿಡಿತ ಸಿಕ್ಕಿಲ್ಲ. ನಗರ ಪ್ರದೇಶಗಳಲ್ಲೇ 3ಜಿ ಸೌಲಭ್ಯ ಸಮರ್ಪಕವಾಗಿ ಒದಗಿಸಲು ಆಗದೆ ಹೆಣಗಾಡುತ್ತಿದೆ.

ಆದರೂ, ಕರ್ನಾಟಕದ ಎರಡನೇ ಸ್ತರದ ನಗರಗಳಾದ, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಕಡೆಗೆ 3ಜಿ ಪರಿಚಯಿಸಿ, ಗ್ರಾಹಕರ ಪ್ರತಿಕ್ರಿಯೆಗಾಗಿ ಕಾದಿದೆ. ಈಗ ಐಫೋನ್ ತರಲು ಯೋಜನೆ ಹಾಕಿಕೊಂಡಿದೆ. ಏರ್ ಟೆಲ್ ಗಿಂತ ಮುಂಚಿತವಾಗಿ ಐಫೋನ್ ಪರಿಚಯಿಸುವುದಾಗಿ ವೊಡಾಫೋನ್ ಕೂಡಾ ಮಾತು ಉಳಿಸಿಕೊಂಡಿಲ್ಲ.

ಯುಎಸ್, ಫ್ರಾನ್ಸ್, ಬ್ರಿಟನ್ ಹಾಗೂ ಜಪಾನ್ ನಲ್ಲಿ ಜುಲೈ 24, 2010ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ಆಪಲ್ ಐಫೋನ್ 4 ಭರ್ಜರಿ ಯಶಸ್ಸು ಪಡೆದಿದೆ. ಈಗ ಇಡೀ ವಿಶ್ವ ಐಫೋನ್ 5 ಬಿಡುಗಡೆಗೆ ಕಾದು ಕೂತಿದೆ. ಈ ಸಮಯದಲ್ಲಿ ಐಫೋನ್ 4 ಇಲ್ಲಿಗೆ ತಂದು ತಾಂತ್ರಿಕವಾಗಿ ಹಿನ್ನೆಡೆಯುಳ್ಳ ಮಾರುಕಟ್ಟೆಗೆ ನಮ್ಮದು ಎಂಬುದನ್ನು ಮತ್ತೊಮ್ಮೆ ದೇಶದ ಪ್ರಮುಖ ಸಂಸ್ಥೆಗಳು ತೋರಿಸತೊಡಗಿವೆ. ಐಪ್ಯಾಡ್ 2 ಬಿಡುಗಡೆ ದಿನಾಂಕ ಘೋಷಿಸಿದ ಸಂದರ್ಭದಲ್ಲಿ ಐಪ್ಯಾಡ್ ಆಗಿನ್ನೂ ಭಾರತದಲ್ಲಿ ಕಾಣಿಸತೊಡಗಿತ್ತು. ಒಟ್ಟಾರೆ, ಭಾರತ ಆಪಲ್ ಉತ್ಪನ್ನಗಳ ಎರಡನೇ ದರ್ಜೆ ಮಾರುಕಟ್ಟೆಯಾಗುವ ದುಃಸ್ಥಿತಿ ತಲುಪಿದೆ.

English summary
Bharti Airtel Ltd, India's Telecom major, said on Monday(Apr.11) it would launch Apple's iPhone 4 in India in the coming months price starting from Rs 35,000. But question arises whether India is becoming second ranked market to Apple Products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X