ರೈಲಿನಲ್ಲಿ ಅತ್ಯಾಚಾರ ಯತ್ನ: ಆರೋಪಿಯ ಸೆರೆ
ಮಂಗಳೂರು,
ಏ.10: ತಿರುವನಂತಪುರದಿಂದ ಮಂಗಳೂರಿಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಇತ್ತೀಚೆಗೆ ನಡೆದಿದೆ. ಕೇರಳ ವಿಶ್ವ ವಿದ್ಯಾನಿಲಯದ ಅರೇಬಿಕ್ ಎಂ.ಎ. ವಿದ್ಯಾರ್ಥಿ ಕುಟ್ಟಿಪರಂಬು ಅಬ್ದುಲ್ ರಹಮಾನ್(26) ಎಂಬ ಆರೋಪಿ ಈಗ ರೈಲ್ವೇ ಪೊಲೀಸರ ಅತಿಥಿಯಾಗಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ಒಂಟಿ ಮಹಿಳೆಯರ ಮೇಲೆ ಬಲಾತ್ಕಾರ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರು ಧೈರ್ಯವಾಗಿ ಸಂಚರಿಸುವುದು ಕಷ್ಟ ಎನಿಸಿದೆ. id="toptextpromo">ಮುಂಜಾನೆ
ವೇಳೆ ಕಾಸರಗೋಡು ಸಮೀಪ ರೈಲು ಪ್ರಯಾಣಿಸುತ್ತಿದ್ದಾಗ ರೈಲಿನಲ್ಲಿ ನಿದ್ರಿಸುತ್ತಿದ್ದ ವಡಗರೆ ನಿವಾಸಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ಬಲವಾಗಿ ಚುಂಬಿಸಿ, ಮಾನಭಂಗ ಮಾಡಲು ಅಬ್ದುಲ್ ರಹಮಾನ್ ಯತ್ನಿಸಿದ್ದಾನೆ. ಈ ಸಮಯದಲ್ಲಿ ಎಚ್ಚರಗೊಂಡ ಯುವತಿ ಬೊಬ್ಬೆ ಕೇಳಿ ಸಹ ಪ್ರಯಾಣಿಕರು ತಕ್ಷಣ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಐಪಿಸಿ ಸೆಕ್ಷನ್ 509 ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ರೈಲಿನಲ್ಲಿ
ಮಹಿಳೆಯರ ಮೇಲೆ ದಾಳಿ ಅತ್ಯಾಚಾರ ಯತ್ನ ಪ್ರಕರಣಗಳು ಹೆಚ್ಚುತ್ತಿದ್ದರೂ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ಕೆಲ ತಿಂಗಳುಗಳ ಹಿಂದೆ ಎರ್ನಾಕುಳಂನಲ್ಲಿ ಅತ್ಯಾಚಾರ ಯತ್ನದ ನಡುವೆ ರೈಲಿನಿಂದ ಕೆಳಗೆ ಹಾರಿದ ಯುವತಿ ಸಾವನ್ನಪ್ಪಿದ ದುರ್ಘಟನೆ ನಡೆದಿತ್ತು.











Click it and Unblock the Notifications