ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಕಲು' ಶಿಕ್ಷಕ ಮಹಡಿಯಿಂದ ಬಿದ್ದು ಸಾವು

By Srinath
|
Google Oneindia Kannada News

Karnataka SSLC Exam 2011
ಬೀಳಗಿ, ಏಪ್ರಿಲ್ 6: ಇಲ್ಲಿನ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ನಕಲು ಮಾಡಲು ಯತ್ನಿಸಿದ್ದ ಶಿಕ್ಷಕರೊಬ್ಬರು ಪರಾರಿಯಾಗುವ ವೇಳೆ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ. ಮೃತ ಶಿಕ್ಷಕ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಪ್ರಕಾಶ ನೀಲನಾಯಕ (38) ಎಂದು ಗುರುತಿಸಲಾಗಿದೆ.

ಸಿದ್ದೇಶ್ವರ ಕಾಲೇಜಿನಲ್ಲಿ ಮಂಗಳವಾರ ಗಣಿತ ಪೆರೀಕ್ಷೆ ನಡೆಯುತ್ತಿತ್ತು. ಆದರೆ ಗಣಿತ ಮತ್ತು ವಿಜ್ಞಾನ ಶಿಕ್ಷಕರಾದ ಪ್ರಕಾಶ, ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಅದೇ ವೇಳೆ ಪರೀಕ್ಷಾ ಕೇಂದ್ರಕ್ಕೆ ದೃಶ್ಯ ಮಾಧ್ಯಮದವರು ಆಗಮಿಸಿದ್ದರು. ಪ್ರಕಾಶನ ಲೀಲೆಗಳನ್ನು ಅರಿತು ಅದನ್ನು ಸೆರೆಹಿಡಯಲು ಮೊದಲ ಮಹಡಿಗೆ ಧಾವಿಸಿದ್ದಾರೆ. ಕ್ಯಾಮೆರಾದಲ್ಲಿ ಸೆರೆ ಸಿಕ್ಕರೆ ಗತಿಯೇನು ಎಂದು ಗಾಬರಿಗೊಂಡ ಪ್ರಕಾಶ ಮಹಡಿಯಿಂದ ನೇರವಾಗಿ ಜಿಗಿದು ಪರಾರಿಯಾಗಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಕಾಲು ಜಾರಿ, ತಲೆ ನೇರವಾಗಿ ನೆಲಕ್ಕೆ ಅಪ್ಪಳಿಸಿದೆ. ತೀವ್ರ ಪೆಟ್ಟು ಬಿದ್ದಿದ್ದರಿಂದ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಗುರುಭ್ಯೋ ನಮಃ: ಪರೀಕ್ಷಾ ಕೇಂದ್ರಗಳಿಗೆ ಸಂಬಂಧಪಟ್ಟ ಸಿಬ್ಬಂದಿ ಮತ್ತು ಪೂರ್ವಾನುಮತಿಯ ಮೇರೆಗೆ ಮಾಧ್ಯಮದವರು ಮಾತ್ರ ಪ್ರವೇಶಿಸಬಹುದು. ಆದರೆ ಹೈಸ್ಕೂಲ್ ಶಿಕ್ಷಕ ಪ್ರಕಾಶ ಕಾಲೇಜು ಆವರಣದೊಳಕ್ಕೆ ಪ್ರವೇಶಿಸಿದ್ದಾದರೂ ಹೇಗೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಲೋಪದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ವಿ. ಎಸ್. ತಳಕೇರಿ ಅವರನ್ನು ಕೇಂದ್ರದಿಂದ ಎತ್ತಂಗಡಿ ಮಾಡಲಾಗಿದೆ. ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಜಿ. ದಾಸರ ತಿಳಿಸಿದ್ದಾರೆ.

English summary
A teacher was killed when he fell from a shopping centre in Bilagi. Even though he was not belonging to the centre, just to help copying he was there. But when he came to know that media cameras are after him, he jumped from the roof. His head directly hit the ground and died on the spot on April 5th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X