ಮೈಸೂರು ವಿವಿ ರಾದ್ಧಾಂತ : ಏ.1ರಂದು ವಿಚಾರಣೆ

ಸಮಿತಿ ಮುಂದೆ ಹಾಜರಾದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪ್ರೊ. ಶಿವಬಸವಯ್ಯ ಅವರು ಸಂಶೋಧನಾ ವಿದ್ಯಾರ್ಥಿನಿ ಎಂ.ಸರಿತಾ ಮಾಡಿರುವ ಆರೋಪಗಳ ವಿರುದ್ದ ತಕರಾರು ಅರ್ಜಿ ಸಲ್ಲಿಸಿದರು. ಅವರು ಸಲ್ಲಿಸಿದ ಅರ್ಜಿಯಲ್ಲಿ ಸರಿತಾ ಸಂಶೋಧನಾ ವಿದ್ಯಾರ್ಥಿಯೇ ಅಲ್ಲ ಅವರಿಗೆ 9 ವರ್ಷದ ಬೋಧನಾ ಅನುಭವವಿಲ್ಲವಾದ್ದರಿಂದ ಸಂಶೋಧನೆಗೆ ಅವರು ಅರ್ಹರಲ್ಲ. ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆಯೂ ಅವರು ವಾದಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಮಿತಿಯ ಅಧ್ಯಕ್ಷ ಪ್ರೊ. ಯಶೋಧರ ಅವರು, ಶಿವಬಸವಯ್ಯ ಅವರ ಮನವಿಯನ್ನು ತಿರಸ್ಕರಿಸಲಾಗಿದೆ. ಸತ್ಯಶೋಧನಾ ಸಮಿತಿ, ಪೊಲೀಸ್ ತನಿಖೆಗಾಗಲೀ, ನ್ಯಾಯಾಲಯದ ವಿಚಾರಣೆಗಾಗಲೀ ಘರ್ಷಣೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸಂದರ್ಭ ಲೈಂಗಿಕ ಕಿರುಕುಳಕ್ಕೊಳಗಾಗಿರುವ ಸರಿತಾ ಅವರು ಕೂಡ ಸಮಿತಿಯ ಮುಂದೆ ಪ್ರಕರಣದ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಸರಿತಾ ಸಲ್ಲಿಸಿರುವ ದೂರು ಹಾಗೂ ಸರಿತಾ ವಿರುದ್ಧ ಪ್ರೊ. ಶಿವಬಸವಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಏ.1ರಂದು ಮಧ್ಯಾಹ್ನ 3ಕ್ಕೆ ನಡೆಸಲು ಸಮಿತಿ ತೀರ್ಮಾನಿಸಿದೆ. ವಿಚಾರಣೆ ಸಂದರ್ಭ ಅಹಿತಕರ ಘಟನೆ ನಡೆಯದಂತೆ ಕ್ರಾಫರ್ಡ್ ಹಾಲ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.











Click it and Unblock the Notifications