ಭಾರತಕ್ಕೆ ವಿಶ್ವ ಕಪ್: ಬೇಜಾನ್ ದಾರೂವಾಲ
ಮೊಹಾಲಿ, ಮಾ. 26: ಈ ಬಾರಿಯ ವಿಶ್ವ ಕಪ್ ಭಾರತಕ್ಕೆ ದಕ್ಕಲಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ ಬೇಜಾನ್ ದಾರೂವಾಲ ಸೋಮವಾರ ಭವಿಷ್ಯ ನುಡಿದಿದ್ದಾರೆ. ಬುಧವಾರ ಪಾಕ್ ವಿರುದ್ಧ ಭಾರತದ ವಿಜಯದುಂದುಭಿ ಮೊಳಗಲಿದೆ. ಅದಕ್ಕೂ ಮುನ್ನ ಶ್ರೀಲಂಕಾ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಮಂಗಳವಾರ ಮಣಿಸಲಿದೆ. ಅಂತಿಮವಾಗಿ ಭಾರತ ಮತ್ತು ಶ್ರೀಲಂಕಾ ನಡುವೆ ಫೈನಲ್ ಹಣಾಹಣಿ ಏರ್ಪಡಲಿದೆ. ಅಲ್ಲಿ ಭಾರತ ಜಯ ಸಾಧಿಸಲಿದೆ ಎಂದು ದಾರೂವಾಲ ಹೇಳಿರುವುದಾಗಿ ಐಬಿಎನ್ ನ್ಯೂಸ್ ಚಾನೆಲ್ ತನ್ನ ಟ್ವಿಟ್ಟರ್ ನಲ್ಲಿ ಹೇಳಿದೆ.
ಜಗದ್ವಿಖ್ಯಾತ ಜ್ಯೋತಿಷಿ ಬೇಜಾನ್ ದಾರೂವಾಲ ಅವರು ವಿಶ್ವದಾದ್ಯಂತ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಹೆಚ್ಚು ಮಾರಾಟವಾಗುವ ಅಂಕಣಕಾರರೂ ಹೌದು. ಮೂಲತಃ ಅವರು ಇಂಗ್ಲಿಷ್ ಪ್ರಾಧ್ಯಾಪಕರು. ಮುಂಬೈ, ಕೋಲ್ಕೊತಾ, ದೆಹಲಿ ಮತ್ತು ಚೆನ್ನೈನಿಂದ ಪ್ರಕಟವಾಗುವ ಸಂಡೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಅವರ ಲೇಖನಗಳು ನಿರಂತರವಾಗಿ ಪ್ರಕಟವಾಗುತ್ತಿವೆ.
ಜತೆಗೆ ಕೋಲ್ಕೊತಾದಿಂದ ಟೆಲಿಗ್ರಾಫ್, ಗೋವಾದಿಂದ ನವಕೈಂಡ್ ಟೈಮ್ಸ್, ನ್ಯೂಯಾರ್ಕ್ ಡೆಲ್ ಆನ್ಯುಯಲ್ ಹೊರೊಸ್ಕೋಪ್, ನ್ಯೂಸ್ ಇಂಡಿಯಾ ಮತ್ತು ಲಂಡನ್ ಬರ್ಕ್ಲಿ ಕಮ್ಯುನಿಕೇಷನ್ಸ್ ನಲ್ಲಿಯೂ ಭವಿಷ್ಯ ಕುರಿತಾದ ಅವರ ಲೇಖನಗಳು ಪ್ರಕಟವಾಗುತ್ತವೆ. ಅವರ ಪುಸ್ತಕಗಳನ್ನು ಹಿಂದ್ ಪಾಕೆಟ್ ಬುಕ್ಸ್ ಪ್ರಕಟಿಸುತ್ತದೆ.












Click it and Unblock the Notifications