ಪಕ್ಷದಲ್ಲಿರುವ ಪುಂಡರನ್ನು ಸದೆಬಡಿಯುವೆ: ಬಿಎಸ್‌ವೈ

ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮದ ಸಾವಯವ ಕೃಷಿಕರಾದ ಲೀಲಾವತಿ ಎಂ. ರೈ ಹಾಗೂ ಮಂಜುನಾಥ ರೈ ದಂಪತಿಗಳ ಮನೆಗೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಿನ್ನೆಯೇ ನಾವೆಲ್ಲರೂ ಒಂದೆಡೆ ಕುಳಿತು ಚರ್ಚೆ ನಡೆಸಿದ್ದೇವೆ ನಮ್ಮ ನಡುವೆ ಯಾವುದೇ ರೀತಿಯ ಅಂತರಿಕ ಭಿನ್ನಾಭಿಪ್ರಾಯಗಳಿಲ್ಲ. ಈ ಕುರಿತಂತೆ ಹೊರಬರುತ್ತಿರುವ ಸುದ್ದಿಗಳೆಲ್ಲಾ ಮಾಧ್ಯಮಗಳ ಸೃಷ್ಟಿಯಾಗಿದೆ. ಮುಂದೆ ನಡೆಯಲಿರುವ ಉಪಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಲಾಗುವುದು ಎಂದರಲ್ಲದೆ, ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ತಮ್ಮ ಅಧಿಕಾರಾವಧಿಯಲ್ಲಿ ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮಾದರಿ ಜಿಲ್ಲೆಯನ್ನಾಗಿ ಮಾಡುವುದಾಗಿ ಹೇಳಿದರು. ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಹಿನ್ನೆಲೆಯಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರದಂದು ಅಧಿಕಾರಿಗಳ ತಂಡವನ್ನು ಜಿಲ್ಲೆಗಳಿಗೆ ಕಳುಹಿಸಲಾಗುವುದು ಎಂದರು. ಕಳೆದ ವರ್ಷ ಬೆಂಗಳೂರಿನಲ್ಲಿ ವಿಶ್ವ ಬಂಡವಾಳದಾರರ ಸಮಾವೇಶ ನಡೆಸಿದಂತೆ ಈ ಬಾರಿಯೂ ಜೂನ್‌ನಲ್ಲಿ ವಿಶ್ವ ಕೃಷಿಕರ ಸಮಾವೇಶವನ್ನು ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿರುವ ಸುಮಾರು 10 ಲಕ್ಷ ಕೃಷಿಕರಿಗೆ ಹತ್ತು ಸಾವಿರ ರೂಪಾಯಿಗಳ ನೆರವನ್ನು ನೀಡಲಾಗುವುದು ಎಂದರಲ್ಲದೆ, ಕೊಡಗಿನ ಬೆಳೆಗಾರರನ್ನು ಕಾಡುತ್ತಿರುವ ಜಮ್ಮಾಬಾಣೆ ಸಮಸ್ಯೆಯನ್ನು ಪರಿಹರಿಸಲಾಗುವುದು ಹಾಗೂ ಜನರಲ್ ತಿಮ್ಮಯ್ಯ ಭವನ, ಗಾಂಧಿಭವನಗಳನ್ನು ನಿರ್ಮಾಣ ಮಾಡಲಾಗುವುದೆಂದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 8.15ಕ್ಕೆ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಜೂನಿಯರ್ ಕಾಲೇಜಿನ ಮೈದಾನಕ್ಕೆ ಬಂದಿಳಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಅಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿದರು. ಬಳಿಕ ಕಂಬಿಬಾಣೆ ಗ್ರಾಮದ ಸಾವಯವ ಕೃಷಿ ಮೂಲಕ ಸಾಧನೆ ಮಾಡಿದ ಲೀಲಾವತಿ ಎಂ. ರೈ ಹಾಗೂ ಮಂಜುನಾಥ ರೈ ದಂಪತಿಗಳ ಮನೆಗೆ ಭೇಟಿ ಪರಿಶೀಲಿಸಿದರು. ಆ ನಂತರ ಕೊಡಗರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಹೆಲಿಪ್ಯಾಡ್‌ನಿಂದ ಮೈಸೂರಿಗೆ ತೆರಳಿದರು. ಕೊಡಗಿಗೆ ಭೇಟಿ ನೀಡಿದ ಸಂದರ್ಭ ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು.











Click it and Unblock the Notifications