ಜಾಮೀನು ತಿರಸ್ಕೃತ, ಚಿರು ಅಳಿಯ ಪರಾರಿ
ಹೈದರಾಬಾದ್
, ಮಾ. 16: ತೆಲುಗು ನಟ ಚಿರಂಜೀವಿ ಅಳಿಯ ಶಿರೀಶ್ ಭಾರದ್ವಾಜ್-ಗೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ಈ ಮಧ್ಯೆ, ಆರೋಪಿ ಪರಾರಿಯಾಗಿದ್ದು, ಇನ್ನೂ ಪೊಲೀಸರ ಬಂಧನಕ್ಕೊಳಪಟ್ಟಿಲ್ಲ. ತೆಲುಗು ನಟ ಕೆ. ಚಿರಂಜೀವಿ ಅವರ ಕಿರಿಯ ಪುತ್ರಿ 23 ವರ್ಷದ ಶ್ರೀಜಾ ತನ್ನ ಪತಿ ಶಿರೀಶ್ ಮತ್ತು ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರೆಸಿ, ಮಾರ್ಚ್ 15ರಂದು ಪೊಲೀಸರಿಗೆ ದೂರು ನೀಡಿದ್ದಳು. id="toptextpromo">ಇದೇ
ಸಂದರ್ಭದಲ್ಲಿ ಇಲ್ಲಿನ ನಾಂಪಲ್ಲಿಯಲ್ಲಿರುವ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಆರ್. ಸುಧಾಕರ್ ರೆಡ್ಡಿ ಅವರು ಶಿರೀಶ್ ತಾಯಿ ಜಿ.ಆರ್. ಸೂರ್ಯಮಂಗಳ ಅವರಿಗೆ ಷರತ್ತಿನ ಜಾಮೀನು ನೀಡಿದರು. ಆದರೆ ಸಾಕ್ಷ್ಯ ನಾಶಪಡಿಸಬಹುದು ಎಂದು ಪ್ರತಿವಾದ ಮಂಡಿಸಿದ್ದರಿಂದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. id='are-slot-1' class='oiad oi-axt oiadv'> id='top-searched-articles'>'ಆರೋಪಿ
ಶಿರೀಶ್ ಅಪರಾಧ ದಾಖಲೆ ಹೊಂದಿದ್ದಾನೆ. 2002ರಲ್ಲಿ ಬಾಲಕಿಯೊಬ್ಬಳನ್ನು ಅಪಹರಿಸಿದ ಪ್ರಕರಣದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಸ್ತುತ, ವರದಕ್ಷಿಣೆಗಾಗಿ ಪತ್ನಿಯ ಮೇಲೆ ದೈಹಿಕ ಹಲ್ಲೆಯನ್ನೂ ಮಾಡಿದ್ದಾನೆ. ಆದ್ದರಿಂದ ಶಿರೀಶ್-ಗೆ ಜಾಮೀನು ನೀಡಬಾರದು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.











Click it and Unblock the Notifications