ಪತ್ರಿಕೋದ್ಯಮ ಹೇಳಿಕೊಟ್ಟರೆ ಬರುವಂಥದ್ದಲ್ಲ : ಜಾರ್ಜ್

TJS George
ಬೆಂಗಳೂರು, ಮಾ. 18 : "ಪತ್ರಿಕೋದ್ಯಮದ ಪರಿಭಾಷೆ ಗೊತ್ತಿಲ್ಲದ ಪ್ರಾಧ್ಯಾಪಕರಿಂದ ಪತ್ರಿಕೋದ್ಯಮ ಕಲಿಯುವುದು ನೀರಿಲ್ಲದ ಕೊಳದಲ್ಲಿ ಈಜು ಕಲಿತಂತೆ" ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ ಸಲಹೆಗಾರ, ಲೇಖಕ ಮತ್ತು ಖ್ಯಾತ ಪತ್ರಕರ್ತ 'ಪದ್ಮ ಭೂಷಣ' ತಾಯಿಲ್ ಜೇಕಬ್ ಸೋನಿ ಜಾರ್ಜ್ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ಇಲಾಖೆ ಆಯೋಜಿಸಿರುವ, ಯುಜಿಸಿ-ಎಸ್ಎಪಿ ಪ್ರಾಯೋಜಿಸಿರುವ, 'ಹೊಸ ಮಾಧ್ಯಮ ಮತ್ತು ರಾಷ್ಟ್ರೀಯ ಬೆಳವಣಿಗೆ' ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಆಶಯ ಭಾಷಣ ಮಾಡಿದರು. ಪತ್ರಿಕೋದ್ಯಮ ಇಂದು ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು ಪತ್ರಿಕೋದ್ಯಮದ ಅಧ್ಯಾಪಕರಿಗೆ ವಸ್ತುಸ್ಥಿತಿಯನ್ನು ಗ್ರಹಿಸುವಂಥ ವಾಸನೆಯಿರಬೇಕು ಎಂದು ಮಾರ್ಮಿಕವಾಗಿ ನುಡಿದರು. [ಗ್ಯಾಲರಿ ನೋಡಿರಿ]

ಆದರೂ, ಪತ್ರಿಕೋದ್ಯಮ ಅತ್ಯಂತ ಪ್ರಭಾವಶಾಲಿಯಾಗಿ ಮತ್ತು ಬಲಶಾಲಿಯಾಗಿ ಬೆಳೆಯುತ್ತಿದ್ದು, ಭಾರತದ ನಾಲ್ಕನೇ ಸ್ತಂಭವಾಗಿ ಹೊರಹೊಮ್ಮಿದೆ ಎಂದು ದಿ ಲೈಫ್ ಇಂಡ್ ಟೈಮ್ಸ್ ಆಫ್ ನರ್ಗಿಸ್ ಮುಂತಾದ ಪುಸ್ತಕಗಳನ್ನು ಬರೆದಿರುವ ಟಿಜೆಎಸ್ ಜಾರ್ಜ್ ಹೇಳಿದರು. ವಿದ್ಯಾರ್ಥಿಗಳು ಕೂಡ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಶಿಕ್ಷಕ ವೃತ್ತಿಯನ್ನು ಮಾತ್ರ ನೆಚ್ಚಿಕೊಳ್ಳುತ್ತಿಲ್ಲ, ಪತ್ರಿಕೋದ್ಯಮವನ್ನೂ ಅಪ್ಪಿಕೊಳ್ಳುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಉಪ-ಕುಲಪತಿ ಎನ್ ಪ್ರಭುದೇವ್ ಅವರು, ಮಾಧ್ಯಮದಲ್ಲಿ ಮೌಲ್ಯಗಳ ಅಧಃಪತನವಾಗುತ್ತಿದ್ದು, ವ್ಯವಸ್ಥಿತವಾಗಿ ಭ್ರಷ್ಟಾಚಾರ ನಾಟಿಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಜೆಎಸ್ ಜಾರ್ಜ್ ಅವರು, ಮಾಹಿತಿಯ ಹಸಿವು ಮತ್ತು ಬೆಳೆಯಬೇಕೆಂಬ ಆಸಕ್ತಿ ಮಾತ್ರ ಪತ್ರಿಕೋದ್ಯಮಕ್ಕೆ ಸಹಕಾರಿಯಾಗಬಲ್ಲದು ಎಂದು ಹೇಳಿದರು.

ಎರಡು ದಿನಗಳ ಕಾಲ ನಡೆಯುತ್ತಿರುವ ಈ ಮಹತ್ವದ ವಿಚಾರ ಸಂಕಿರಣದಲ್ಲಿ ಆನ್ ಲೈನ್ ಪತ್ರಿಕೋದ್ಯಮಕ್ಕೆ ಹೆಜ್ಜೆ ಇಟ್ಟವರಲ್ಲಿ ಮೊದಲಿಗರಾಗಿರುವ ಒನ್ ಇಂಡಿಯಾ ಸಿಇಓ ಬಿಜಿ ಮಹೇಶ್ ಅವರು ಸೇರಿದಂತೆ ಹಲವಾರು ಗಣ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಿಜಿ ಮಹೇಶ್ ಅವರು ಆನ್ ಲೈನ್ ಪತ್ರಿಕೋದ್ಯಮ : ನಿನ್ನೆ ಮತ್ತು ಇಂದು ಎಂಬ ವಿಷಯ ಕುರಿತು ವಿಷಯ ಮಂಡನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+