ಜೆಡಿಎಸ್ ನಿರ್ನಾಮ ನನ್ನ ಗುರಿ : ಯಡಿಯೂರಪ್ಪ

CM BSY takes on JDS
ಬೆಂಗಳೂರು, ಮಾ.18 : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು, ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ಸಹಿಸದ ಜೆಡಿಎಸ್ ಪಕ್ಷ ಕೆಟ್ಟ ಹಾದಿ ಹಿಡಿದಿದೆ. ಬಿಜೆಪಿಯಲ್ಲಿರುವ ಒಗ್ಗಟ್ಟನ್ನು ಮುರಿದು, ಪರ್ಯಾಯ ಸರ್ಕಾರ ರಚನೆಯ ಕನಸು ಕಾಣುತ್ತಿದೆ. ಅದು ಎಂದಿಗೂ ಸಾಧ್ಯವಿಲ್ಲ. ಜೆಡಿಎಸ್ ನಿರ್ನಾಮ ಮಾಡುವುದು ನನ್ನ ಗುರಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಸುದ್ದಿಗಾರರಿಗೆ ಇಂದು ಹೇಳಿದರು.

ಇದಕ್ಕೂ ಮುನ್ನ ಬಿಜೆಪಿ ಶಾಸಕರನ್ನು ಒಂದೆಡೆ ಸೇರಿಸಿ ಸಭೆ ನಡೆಸಿದ ಯಡಿಯೂರಪ್ಪ, ನಿನ್ನೆಗಿಂತ ಇಂದು ಶಾಂತಚಿತ್ತರಾಗಿದ್ದರು. ಕುಮಾರಸ್ವಾಮಿ ಅವರು ಜೆಡಿಎಸ್ ಸರ್ಕಾರವಿದ್ದಾಗ ಒಂದೇ ದಿನದಲ್ಲಿ 48 ನಿವೇಶನಗಳನ್ನು ಅವರ ಕುಟುಂಬ ವರ್ಗದವರಿಗೆ ಹಂಚಿ ದಾಖಲೆ ನಿರ್ಮಿಸಿದ್ದಾರೆ. ಸಂಸತ್ತಿನಲ್ಲಿ ಕರ್ನಾಟಕಕ್ಕೆ ದಕ್ಕಬೇಕಾದ ಅನುದಾನ ಬಗ್ಗೆ ಒಂದು ಪ್ರಶ್ನಿಸಿದ ಮಾಜಿ ಪ್ರಧಾನಿಗಳು, ಪ್ರೇರಣಾ ಟಸ್ಟ್ ಬಗ್ಗೆ ಸೊಲ್ಲೆತ್ತಿರುವುದು ಏಕೆ? ರಾಜ್ಯಕ್ಕೆ ಸಿಗಬೇಕಾದ ಎಲ್ಲಾ ಅನುದಾನಗಳು ವಿಳಂಬವಾಗಲು ಗೌಡರು ಕಾರಣ. ಬಿಜೆಪಿ ಸರ್ಕಾರ ಕೃಷಿ ಬಜೆಟ್ ಮಂಡಿಸಿದ್ದು ಜೆಡಿಎಸ್ ಹೊಟ್ಟೆಗೆ ಬೆಂಕಿ ಹಾಕಿದ ಹಾಗೆ ಆಗಿದೆ. ಕಾಂಗ್ರೆಸ್ ಜೊತೆ ಮೈತ್ರಿ ಕನಸು ಕಾಣುತ್ತಿರುವ ಜೆಡಿಎಸ್ ಜೊತೆ ಸೇರಿದರೆ ಕಾಂಗ್ರೆಸ್ ಕೂಡಾ ನಾಶವಾಗುತ್ತದೆ ಎಂದು ಯಡಿಯೂರಪ್ಪ ಅವರು ಹೇಳಿದರು.

ಟೀ ಪಾರ್ಟಿಗೆ ಪ್ರಮುಖರು ಚಕ್ಕರ್ : ಕೆಎಸ್ ಈಶ್ವರಪ್ಪ, ಜನಾರ್ದನರೆಡ್ಡಿ ಬಳಗದ ಸುಮಾರು 50 ಶಾಸಕರು ಗೈರು ಹಾಜರಾಗಿದ್ದಾರೆ. ವಿಶೇಷವೆಂದರೆ ಸಿಎಂ ಅವರ ಆಪ್ತ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಚಕ್ಕರ್ ಹಾಕಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನಾಲ್ಕನೆ ಬಾರಿ ಭಿನ್ನಮತ ಎದುರಿಸುತ್ತಿರುವ ಯಡಿಯೂರಪ್ಪ ಅವರ ಶಕ್ತಿ ಕುಂದಿಸಿ, ಮಣಿಸುವುದು ಭಿನ್ನರ ಉದ್ದೇಶವಾಗಿದೆ. ಯಡಿಯೂರಪ್ಪ ಅವರ ನಡವಳಿಕೆಯಿಂದ ಬೇಸರಗೊಂಡಿರುವ ನಾಯಕರು ಹೈ ಕಮಾಂಡ್ ಗೆ ಈಗಾಗಲೇ ತಮ್ಮ ನಿರ್ಣಯ ತಿಳಿಸಿದ್ದಾರೆ.

ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ, ಸೋಮಣ್ಣ, ರೇಣುಕಾಚಾರ್ಯ ಮುಂತಾದವರ ಟೀಂ ಈಗ ಭಿನ್ನರ ಮನವೊಲಿಕೆಯಲ್ಲಿ ತೊಡಗಿದೆ. ರಾಜ್ಯದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಇನ್ನೂ ಯಾವ ನಡೆ ಇಡಬೇಕು ಎಂದು ನಿರ್ಧರಿಸಿಲ್ಲ. ಹಲವು ಅಗ್ನಿಪರೀಕ್ಷೆ ಎದುರಿಸಿ ಗೆದ್ದು ಬಂದಿರುವ ಯಡಿಯೂರಪ್ಪ ಅವರು ಭಿನ್ನರ ಮನ ಒಲಿಸುವಲ್ಲಿ ಯಶಸ್ವಿಯಾಗುವ ವಿಶ್ವಾಸ ಹೊಂದಿದ್ದಾರೆ. ಭಿನ್ನಮತೀಯರು ಕೂಡಾ ಸಿಎಂ ತಲೆದಂಡಕ್ಕೆ ಕಾದು ಕೂತಿದ್ದಾರೆ. ಯಾರ ಹಠ ಗೆಲ್ಲುವುದೋ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+