ಬ್ಯಾಂಕ್ ಆಫ್ ಅಮೆರಿಕಾ ಅಂಬಾರಿಯೇರಿದ ಮುಖೇಶ್

ಅಮೆರಿಕಾದ ಬ್ಯಾಂಕ್ ಗಳಲ್ಲಿಯೇ ಬ್ಯಾಂಕ್ ಆಫ್ ಅಮೆರಿಕಾ ಅತೀ ದೊಡ್ಡದು. ಇಂಥ ಶ್ರೀಮಂತ ಬ್ಯಾಂಕ್ ನ ನಿರ್ದೇಶಕ ಮಂಡಳಿಗೆ ಆಯ್ಕೆಯಾಗಿರುವ ಅಮೆರಿಕೇತರರಲ್ಲಿ ಮುಖೇಶ್ ಅಂಬಾನಿಯೇ ಮೊದಲಿಗರು. ಮುಂಬರುವ ವಾರ್ಷಿಕ ಚುನಾವಣೆಯಲ್ಲಿ ಮುಖೇಶ್ ಅಂಬಾನಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್ ಆಫ್ ಅಮೆರಿಕಾದ ಚೇರ್ಮನ್ ಚಾರ್ಲ್ಸ್ ಓ ಹಾಲಿಡೆ ಅವರು ಅಂಬಾನಿಯ ಸೇರ್ಪಡೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, "ಜಾಗತಿಕ ದೃಷ್ಟಿಕೋನವುಳ್ಳ ಮುಖೇಶ್ ಅಂಬಾನಿಯವರ ಉಪಸ್ಥಿತಿಯಿಂದ ಬ್ಯಾಂಕ್ ನ ಶೇರುದಾರರು ಪ್ರಯೋಜನ ಪಡೆಯಲಿದ್ದಾರೆ. ಇಂಧನ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕ್ಷೇತ್ರಗಳ ನಿರ್ವಹಣೆಯಲ್ಲಿ ಅವರು ಅಸಾಧ್ಯ ನೈಪುಣ್ಯತೆ ಹೊಂದಿದ್ದಾರೆ" ಎಂದು ಅಂಬಾನಿಯನ್ನು ಹೊಗಳಿ ಅಂಬಾರಿಯ ಮೇಲೆ ಕುಳಿಸಿದ್ದಾರೆ.
ನಿರ್ದೇಶಕ ಮಂಡಳಿಗೆ ಆಯ್ಕೆಯಾಗಿದ್ದಕ್ಕೆ ಪ್ರತಿತ್ರಿಯಿಸಿರುವ ಮುಖೇಶ್, ನನಗೆ ಅತೀವ ಸಂತಸವಾಗಿದೆ. ವಿಶ್ವದ ಅತೀ ದೊಡ್ಡ ಹಣಕಾಸು ಸಂಸ್ಥೆಯ ಮಂಡಳಿಗೆ ಅಮೆರಿಕೇತರ ನಿರ್ದೇಶಕನಾಗಿ ಆಯ್ಕೆಯಾಗಿದ್ದು ನನಗೆ ದೊರೆತಿರುವ ವಿಶೇಷ ಗೌರವ. ಬ್ಯಾಂಕ್ ಆಫ್ ಅಮೆರಿಕಾದ ಬೆಳವಣಿಗೆಗೆ ನನ್ನ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಗೌರವದ ಹೊರತಾಗಿ ಮುಖೇಶ್ ಅಂಬಾನಿಯವರು, ಭಾರತದ ಪ್ರಧಾನಿ ವ್ಯಾಪಾರ ಮತ್ತು ಉದ್ಯಮ ಮಂಡಳಿಯ ಸದಸ್ಯರಾಗಿದ್ದಾರೆ. ಇಂಡೋ-ಅಮೆರಿಕಾ ಸಿಇಓ ಫೋರಂನ ಸಕ್ರಿಯ ಸದಸ್ಯರೂ ಅವರಿಗಾದ್ದಾರೆ. ಜಪಾನ್-ಇಂಡಿಯಾ ಬಿಸಿನೆಸ್ ಲೀಡರ್ಸ್ ಫೋರಂನ ಅಧ್ಯಕ್ಷ ಸ್ಥಾನವನ್ನೂ ಅವರು ಪಡೆದಿದ್ದಾರೆ. ಜೊತೆಗೆ ಇಂಡೋ-ರಷ್ಯಾ ಸಿಇಓ ಕೌನ್ಸಿಲ್ ನ ಅಧ್ಯಕ್ಷರೂ ಆಗಿದ್ದಾರೆ.












Click it and Unblock the Notifications