ಕಾಳಧನದ ಮೇಲೆ ಮಾಜಿ ಮಹಿಳಾ ಸಿಎಂ ಕರಿನೆರಳು?

ಹಸನ್ ನನ್ನು ಹತ್ತಿರದಿಂದ ಬಲ್ಲವರು ಹಾಗೂ ಕೆಲ ತನಿಖಾಧಿಕಾರಿಗಳ ಪ್ರಕಾರ ಅಷ್ಟೊಂದು ಹಣ ಸಂಪಾದಿಸುವಷ್ಟು ಬುದ್ಧಿವಂತ ಅವನಲ್ಲ. ಹಾಗಾದರೆ ಅವನ ಕೈಗೆ ಅಷ್ಟೊಂದು ಹಣ ಬಂದಿದ್ದು ಹೇಗೆ ಎಂಬುದರ ಒಳಸುಳಿ ನೋಡಿದಾಗ ಮಾಜಿ ಮಹಿಳಾ ಮುಖ್ಯಮಂತ್ರಿಯ ಕರಿನೆರಳು ಸ್ಪಷ್ಟವಾಗುತ್ತದೆ.
ಈ ಮಾಜಿ ಮುಖ್ಯಮಂತ್ರಿ ಹಸನ್ ಅಲಿಗೆ ಬಹಳ ಹತ್ತಿರ. ಅನೇಕ ವರ್ಷಗಳಿಂದ ಇವರಿಬ್ಬರ ಮಧ್ಯೆ ಹಣಕಾಸು ವ್ಯವಹಾರ ಹರಿದಿದೆ. ಆ ಮಾಜಿ ಮುಖ್ಯಮಂತ್ರಿಯೇ ಹಸನ್ ಅಲಿ ಮೂಲಕ ಸಾವಿರಾರು ಕೋಟಿ ರುಪಾಯಿ ಮೊತ್ತದ ಕಾಳ ಧನವನ್ನು ಜರ್ಮನಿಯ ಯುಬಿಎಸ್ ಬ್ಯಾಂಕಿನಲ್ಲಿ ಜಮಾ ಮಾಡಿರುವ ಸಾಧ್ಯತೆ ಇದೆ. ದಕ್ಷಿಣ ಭಾರತದಲ್ಲಿ ಪ್ರಮೀಳಾ ರಾಜ್ಯಭಾರ ಕಂಡಡುಬಂದಿದ್ದು ತಮಿಳುನಾಡಿನಲ್ಲಿ ಮಾತ್ರ. ಒಬ್ಬರು ಎಂಜಿ ರಾಮಚಂದ್ರನ್ ಪತ್ನಿ ಮತ್ತೊಬ್ಬರು ಕುಮಾರಿ ಜಯಲಲಿತಾ. ಹಸನ್ ಅಲಿಗೆ ಮಾಜಿ ಮಹಿಳಾ ಸಿಎಂ ಜತೆ ಸಂಭಂದವಿರುವುದೇ ನಿಜವಾದರೆ ಇವರಿಬ್ಬರಲ್ಲಿ ಆಕೆ ಯಾರು ಎಂಬುದು ಸದ್ಯಕ್ಕೆ ನಿಮ್ಮ ಊಹೆಗೆ ಬಿಟ್ಟಿದ್ದು. ಆದರೆ, ಸಿಬಿಐ ಅಧಿಕಾರಿಗಳಿಗೆ ಆ ಹೆಸರು ತಿಳಿದಿದೆ.
ಸದ್ಯ ಹಸನ್ ಅಲಿಯ ಖಾತೆಯಲ್ಲಿ 36 ಸಾವಿರ ಕೋಟಿ ರು. ಕಪ್ಪು ಹಣವಿದೆ. 50 ಸಾವಿರ ಕೋಟಿ ರು. ತೆರಿಗೆ ವಂಚನೆ ಪ್ರಕರಣದಲ್ಲಿ ಅವನಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. 2007ರಲ್ಲಿ ಅವನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. 2008ರಲ್ಲಿ ನಕಲಿ ಪಾಸ್ ಪೋರ್ಟ್ ಹೊಂದಿದ್ದ ಆರೋಪದ ಮೇಲೆ ಅವವನ್ನು ಬಂಧಿಸಲಾಗಿತ್ತು.












Click it and Unblock the Notifications