ತಿರುಪತಿ ಲಡ್ಡುಗೆ ಕೆಂಎಂಫ್ ತುಪ್ಪ ಖೋತಾ
ಬೆಂಗಳೂರು,
ಮಾರ್ಚ್3: ಅಬ್ಬಾ! ತಿರುಪತಿ ಲಡ್ಡುನಾ? ಭಕ್ತಿ ಜತೆಗೆ ರುಚಿಯನ್ನೂ ಉಕ್ಕಿಸುವ ಪ್ರಸಾದ. ಯಾರಿಗೆ ತಾನೇ ಬೇಡ ಹೇಳಿ. ಆದರೆ ಸದ್ಯಕ್ಕೆ ಲಡ್ಡು ಸ್ವಲ್ಪ ರುಚಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಕರ್ನಾಟಕ ಹಾಲು ಮಹಾಮಂಡಳ ಬಹಳ ಹಿಂದಿನಿಂದಲೂ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದೆ. id="toptextpromo">ಈಗೇನಾಗಿದೆಯೆಂದರೆ
ರಾಜ್ಯದಲ್ಲಿ ಹಾಲು ಉತ್ಪಾದಕರು ಡೇರಿಗೆ ಹಾಲು ಹಾಕುವುದನ್ನು ಒಂದಷ್ಟು ಕಡಿಮೆ ಮಾಡಿದ್ದಾರೆ. ಇದು ಕೆಎಂಎಫ್ ಮೇಲೆ ಪರಿಣಾಮ ಬೀರಿದ್ದು, ತುಪ್ಪ ಮಾಡುವುದು ಕಡಿಮೆಯಾಗಿದೆ. ಇದು ವಿಶ್ವವಿಖ್ಯಾತ ತಿರುಪತಿ ಲಡ್ಡು ಮೇಲೆ ಅಡ್ಡಪರಿಣಾಮ ಬೀರಿದೆ. ರಾಜ್ಯದಲ್ಲಿನ ಹಾಲು ಉತ್ಪಾದಕರು ಆಗಾಗ ಹೀಗೆ ವಲಸೆ ಹೋಗುವುದು ವಾಡಿಕೆ. ಹೆಚ್ಚಿನ ಕಾಸು ಬರುತ್ತದೆಂದು ನೆರೆಯ ಆಂಧ್ರಕ್ಕೆ ಹಾಲು ಹಾಕುವುದು ಸಾಮಾನ್ಯವಾಗಿದೆ. ಇದರಿಂದ ಕೆಎಂಎಫ್ ಗೆ ಪೀಕಲಾಟಕ್ಕಿಟ್ಟುಕೊಂಡಿದ್ದು, ಟಿಟಿಡಿ ಜತೆಗಿನ ಒಪ್ಪಂದವನ್ನು ಗೌರವಿಸುವುದು ತ್ರಾಸದಾಯಕವಾಗಿದೆ. id='are-slot-1' class='oiad oi-axt oiadv'> id='top-searched-articles'>ಕೆಎಂಎಫ್
ಸರಾಸರಿ ದಿನಕ್ಕೆ 25,000 ಟನ್ ತುಪ್ಪ ಉತ್ಪಾದಿಸುತ್ತದೆ. ಇದನ್ನು ಹೆಚ್ಚಾಗಿ ಖರೀದಿಸುವುದು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ. ನಾವು 6,000 ಟನ್ನಷ್ಟು ಉತ್ತಮ ಗುಣಮಟ್ಟದ ತುಪ್ಪ ಕಳಿಸುತ್ತೇವೆ. ಟಿಟಿಡಿಗೆ ನಮ್ಮ ತುಪ್ಪ ಎಂದರೆ ಬಲುಪ್ರೀತಿ. ಇದು ನಂದಿನಿ ತುಪ್ಪದ ಮಹಾತ್ಮೆ. ಅಂದಹಾಗೆ ನಮ್ಮ ಇತರೆ ಗ್ರಾಹಕರಿಗೂ ಇದೇ ತುಪ್ಪ ಮಾರುತ್ತೇವೆ. ಹಾಲು ಸರಬರಾಜು ಕೊರತೆಯಾದಾಗ ಈ ಸಮಸ್ಯೆ ಉದ್ಭವವಾಗುತ್ತದೆ' ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಶೀಘ್ರವೇ ಸರಬರಾಜು ಸಹಜ ಸ್ಥಿತಿಗೆ ಬರುತ್ತಿದ್ದಂತೆ ತುಪ್ಪ ರವಾನೆ ಸರಾಗವಾಗುತ್ತದೆ ಎಂದೂ ಅವರು ತಿಳಿಸಿದರು.











Click it and Unblock the Notifications