ಎಲ್ಲಾರನ್ ಕಾಯೋ ದೇವರೇ, ನಿಮ್ ಇಮೇಲ್ ಗೇ ಕನ್ನನಾ?
ಬೆಂಗಳೂರು,
ಮಾರ್ಚ್3: ನೃಪತುಂಗಾ ರಸ್ತೆಯ ಕಚೇರಿಯಲ್ಲಿ ತಣ್ಣಗೆ ಕುಳಿತಿರುವ ರಾಜ್ಯ ಪೊಲೀಸ್ ಮುಖ್ಯಸ್ಥ ಡಿಜಿಪಿ ಎಸ್.ಟಿ. ರಮೇಶ್ ಅವರು ಕಂಡೂ ಕೇಳರಿಯದ ರೀತಿಯಲ್ಲಿ ಮ್ಯಾಡ್ರಿಡ್್ನಲ್ಲಿರುವ ಹೋಟೆಲೊಂದಕ್ಕೆ ಬಿಲ್ ಪಾವತಿಗಾಗಿ 2515 ಯುರೊ ಹಣ ಪಾವತಿಸಲು ಅಂಗಾಲಾಚುತ್ತಿದ್ದಾರೆ! ಯಾಕಪ್ಪಾ ಹೀಗೆ ಎಂದರೆ ಅವರ ವೈಯಕ್ತಿಕ ಇಮೇಲ್ ಗೆ ಕನ್ನ ಹಾಕಿರುವ ಸೈಬರ್ ಖದೀಮರು ಈ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಇದು ಸ್ಪೇನ್್ನಲ್ಲಿರುವ ಖದೀಮರು ನಡೆಸಿರುವ ಕರಾಮತ್ತು ಎಂದು ತಿಳಿದುಬಂದಿದೆ. id="toptextpromo">ಇಂತಹ
ಮೇಲ್್ಗಳು ನಿಮಗೂ ಬಂದಿರಬಹುದು. ಅಯ್ಯೊ ಇವ ನಮ್ಮವ ಎಂದು ಯಾಮಾರಿದರೋ ನಿಮ್ಮ ಹಣ ಹರೋ ಹರೋ. ಜಾಗ್ರತೆ ವಹಿಸಿ. ಈ ಮಧ್ಯೆ, ಅಯ್ಯೊ ದೇವರೇ ಇದೆಲ್ಲ ನನಗೆ ಇಳಿದೇ ಇಲ್ಲ. ನನ್ನ ಇಮೇಲ್ ಖಾತೆ ಹ್ಯಾಕ್ ಮಾಡಿರುವುದಾದರೆ (ಬೇರೊಬ್ಬರ ಇಮೇಲ್ ಗೆ ಕನ್ನಹಾಕುವುದು) ನಾನು ಅದನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಖಂಡಿತ ಕಾನೂನು ಹೋರಾಟ ಕೈಗೊಳ್ಳುವೆ. ಖದೀಮರಿಗೆ ಪಾಠ ಕಲಿಸುವೆ ಎಂದು ಡಿಜಿ ಐಜಿ ಸಾಹೇಬರು ಗರಂ ಆಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಮೇಶ್
ಅವರ ಇಮೇಲ್್ನಲ್ಲಿ ಹರಿದಾಡಿರುವ ಕಳ್ಳ ಸಂದೇಶಗಳು ಹೀಗಿವೆ: ಯಸ್ ನಿಮಗೆ ಇದು ಸಕಾಲದಲ್ಲಿ ತಲುಪಿರಬಹುದು ಎಂದು ಆಶಿಸುತ್ತೇನೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಾನು ಸ್ಪೇನ್್ನ ಮ್ಯಾಡ್ರಿಡ್ ಗೆ ಬಂದಿರುವೆ. ಆದರೆ ಇಲ್ಲಿ ಸಾಕಷ್ಟು ತೊಂದರೆಗೆ ಸಿಲುಕಿರುವೆ. ಹಣ ಮತ್ತಿತರ ಅಮೂಲ್ಯ ವಸ್ತುಗಳಿದ್ದ ನನ್ನ ಪರ್ಸ್ ಕಳೆದುಕೊಂಡಿರುವೆ. ಆದರೆ ಹೋಟೆಲಿನವರು ಹಣ ಪಾವತಿಸುವವರೆಗೂ ಪಾಸ್ ಪೋರ್ಟ್ ಸೇರಿದಂತೆ ನನ್ನ ಮಹತ್ವದ ದಾಖಲೆಗಳನ್ನು ಕೊಡುವುದಿಲ್ಲ ಎಂದು ನನ್ನಿಂದ ಪಡೆದಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ. ನನಗೆ 2,515 ಯುರೊಗಳನ್ನು ನೀಡಿ ಹೋಟೆಲ್ ಬಿಲ್ ಪಾವತಿಸಲು ನೆರವಾಗಿ. ನಾನು ಊರಿಗೆ ವಾಪಸಾಗುತ್ತಿದ್ದಂತೆ ನಿಮ್ಮ ಹಣ ಪಾವತಿಸುವೆ. ನೆರವು ನೀಡಿ ಪ್ಲೀಸ್ ಎಂದೆಲ್ಲ ಅಂಗಾಲಾಚಲಾಗಿದೆ.











Click it and Unblock the Notifications