ಬಜೆಟ್ : ತವರಿನ ತೊಟ್ಟಿಲು ತೂಗಿದ ಮಮತಾ
ನವದೆಹಲಿ,
ಫೆ.25: ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಲೋಕಸಭೆಯಲ್ಲಿ ಶುಕ್ರವಾರ ತಮ್ಮ ಮೂರನೇ ರೈಲ್ವೆ ಮುಂಗಡಪತ್ರ ಮಂಡಿಸತೊಡಗಿದ್ದಾರೆ. ಇದೊಂದು ಜನಸಾಮಾನ್ಯರ ಬಜೆಟ್ ಎಂದು ಬಣ್ಣಿಸಿದ ಮಮತಾ ದೀದೀ ಪ್ರಯಾಣ ದರಗಳನ್ನು ಏರಿಸುವ ಗೋಜಿಗೆ ಹೋಗಿಲ್ಲ. ಸತತವಾಗಿ 8ನೇ ವರ್ಷವೂ ಪ್ರಯಾಣ ದರ ಹೊರೆಯಾಗಿಲ್ಲ. id="toptextpromo">ವಿಧಾನಸಭೆ
ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳಕ್ಕೆ ನಿರೀಕ್ಷೆಯಂತೆ ತವರಿನ ಮಮತೆ ತೋರಿದ್ದಾರೆ. ದೇಶಾದ್ಯಂತ ಒಟ್ಟು 700 ಕಿ.ಮೀ. ಹಳಿ ವಿಸ್ತರಣೆಗೆ ಹಸಿರು ನಿಶಾನೆ ತೋರಲಾಗಿದೆ. ಒಟ್ಟು ಯೋಜನಾ ವೆಚ್ಚ 57,630 ಕೋಟಿ ರು. ಮಣಿಪುರಕ್ಕೆ ಪ್ರಥಮ ಬಾರಿಗೆ ರೈಲು ದರ್ಶನ ಭಾಗ್ಯ ದೊರೆತಿದೆ. ಒಟ್ಟಾರೆ ಈ ಬಜೆಟ್ ವರ್ಷದಲ್ಲಿ 1.75 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>ಪ್ರಸಕ್ತ
ರೈಲ್ವೆ
ಬಜೆಟ್‌ನ
ಸಾಮಾನ್ಯ
ನೋಟ
ಹೀಗಿದೆ:
* ಹವಾನಿಯಂತ್ರಿತ ಮತ್ತು ಹವಾನಿಯಂತ್ರಿತವಲ್ಲದ ಸೀಟ್ ಬುಕ್ಕಿಂಗ್ ಶೇ. 50ರಷ್ಟು ಇಳಿಕೆ
* ಹಿರಿಯ ನಾಗರಿಕರ (ಮಹಿಳೆಯರಿಗೆ) ವಯೋಮಿತಿ 62 ರಿಂದ 58ಕ್ಕೆ ಇಳಿಕೆ
* ದೂರ ಪ್ರಯಾಣಕ್ಕಾಗಿ 'ಗೋ ಇಂಡಿಯಾ' ಸ್ಮಾರ್ಟ್ ಕಾರ್ಡ್ ಜಾರಿ
* ಅಂತಾರಾಷ್ಟೀಯ ಕ್ರೀಡಾ ಸ್ಪರ್ಧೆಗಳಲ್ಲಿ ಕ್ರೀಡಾಳುಗಳ ಸಾಧನೆ ಹೆಚ್ಚುತ್ತಿರುವುದನ್ನು ಪರಿಗಣಿಸಿ ಇಲಾಖೆಯಲ್ಲಿ ಪ್ರತ್ಯೇಕ ಕ್ರೀಡಾ ವಿಭಾಗ ಆರಂಭ
* ಮೊದಲ ಬಾರಿಗೆ ರೈಲ್ವೆಗಾಗಿ 16,000 ಮಾಜಿ ಸೈನಿಕರ ನೇಮಕ
* ಆದಾಯ ಒಂದು ಲಕ್ಷ ಕೋಟಿ ರು. ಏರಿಕೆಯ ಗುರಿ
* ಮಾನ್ಯತೆ ಪಡೆದ ಪತ್ರಕರ್ತರಿಗೆ ಶೇ. 50ರ ರಿಯಾಯಿತಿ ದರ ಪ್ರಯಾಣವನ್ನು ವರ್ಷಕ್ಕೆ ಹಾಲಿ ಒಂದರಿಂದ ಎರಡು ಬಾರಿಗೆ ಏರಿಕೆ.
* ಭಾರಿ ಹೊರೆಯಾದ 6ನೇ ವೇತನ ಆಯೋಗ-ಇಲಾಖೆಯ ಖರ್ಚು ಒಟ್ಟು ಶೇ. 92ರಷ್ಟು ಹೆಚ್ಚಳ
* ಕಳೆದ ವರ್ಷದ ನಷ್ಟ 3,500 ಕೋಟಿ ರು.
* ಏರ್‌ಪೋರ್ಟ್‌ಗಳಲ್ಲಿ ಬಳಸುವಂತಹ ಟ್ರಾಲಿಗಳ ಬಳಕೆ ಹೆಚ್ಚಳಕ್ಕೆ ಒಲವು












Click it and Unblock the Notifications