ಹೆರಿಗೆ ವೇಳೆ ತಾಯಿ, ಅವಳಿ ಮಕ್ಕಳ ಸಾವು, ದಾಂಧಲೆ

ಘಟನೆಯ ವಿವರ: 27 ವರ್ಷದ ಗರ್ಭಿಣಿ ಧನಲಕ್ಷಿ ಜೆಜೆ ನಗರದ ನಿವಾಸಿಯಾಗಿದ್ದು, ಹೆರಿಗೆ ನೋವಿನಿಂದ ಫೆಬ್ರವರಿ 9ರಂದು ಚಾಮರಾಜಪೇಟೆಯ ಕೆಂಪೇಗೌಡ ಆಸ್ಪತ್ರೆಗೆ ದಾಖಲಾಗಿದ್ದರು. 'ಮೊದಲು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದೆವು. ಆದರೆ ಅಲ್ಲಿ ಬೆಡ್ ಇಲ್ಲವೆಂದು ವೈದ್ಯರು ನಿರಾಕರಿಸಿದರು. ಕ್ಷಣ ಕಿಮ್ಸ್‌ಗೆ ದಾಖಲಿಸಲಾಯಿತು' ಎಂದು ಅವರ ಕುಟುಂಬದವರು ಹೇಳಿದ್ದಾರೆ.
'ಧನಲಕ್ಷ್ಮಿ ಫೆ. 11ರಂದು ಹೆಣ್ಣು ಮತ್ತು ಗಂಡು ಮಗುವಿಗೆ ಜನ್ಮ ನೀಡಿದರು. ಹೆಣ್ಣು ಮಗು ಜನಿಸುತ್ತಿದ್ದಂತೆಯೇ ಮೃತ್ಯುಗೀಡಾದಳು. ಗಂಡು ಮಗು ಫೆ. 22ರವರೆಗೂ ಜೀವಂತವಾಗಿತ್ತು. ಈ ಮಧ್ಯೆ ಹೆರಿಗೆ ತುಂಬಾ ಸಂಕೀರ್ಣವಾಗಿ, ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು. ಶಸ್ತ್ರಚಿಕಿತ್ಸೆ ಮಾಡಿದಾಗ ಹೆಣ್ಣು ಮಗು ಭ್ರೂಣದಲ್ಲಿಯೇ ಸಾವನ್ನಪ್ಪಿತ್ತು. ತಾಯಿಯ ಆರೋಗ್ಯ ತುಂಬಾ ಏರುಪೇರಾಯಿತು. ಕರುಳು ತೂತುಬಿದ್ದಿತ್ತು. ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೂ ಆಕೆ ಬುಧವಾರ ಮೃತಪಟ್ಟಿದ್ದಾಳೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯವೇನೂ ಇಲ್ಲ. ಕುಟುಂಬದವರಿಗೆ ಮೊದಲೇ ತಿಳಿಸಲಾಗಿತ್ತು ಎಂದು ಕಿಮ್ಸ್ ವೈದ್ಯಕೀಯ ನಿರ್ದೇಶಕ ಡಾ. ವೆಂಕಟೇಶ್ ತಿಳಿಸಿದ್ದಾರೆ.
ಆದರೆ ವೈದ್ಯರು ಸಕಾಲದಲ್ಲಿ ತಮಗೆ ಖಚಿತ ಮಾಹಿತಿ ನೀಡಲಿಲ್ಲ ಎಂದು ಆರೋಪಿಸಿ ಧನಲಕ್ಷ್ಮಿ ಕುಟುಂಬದವರು, ಸ್ನೇಹಿತರು ಬುಧವಾರ ಫೆ. 23ರಂದು ಆಸ್ಪತ್ರೆ ಎದುರು ಸುಮಾರು ಎರಡು ಗಂಟೆ ಕಾಲ ಧರಣಿ ನಡೆಸಿದರು. ಸೆಂಟ್ರಲ್ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದರು.












Click it and Unblock the Notifications