2ಜಿ ಹಗರಣ: ಜೆಪಿಸಿ ವಿಚಾರಣೆಗೆ ಕೇಂದ್ರ ಅಸ್ತು

ಬಜೆಟ್ ಅಧಿವೇಶನದ ಮೊದಲ ಕಾರ್ಯಕಾರಿ ದಿನವಾದ ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಲೋಕಸಭೆಯಲ್ಲಿ ಸರಕಾರದ ಈ ನಿರ್ಧಾರವನ್ನು ಪ್ರಕಟಿಸಿದರು. ಮಹತ್ವದ ಬಜೆಟ್ ಅಧಿವೇಶನ ಸುಸೂತ್ರವಾಗಿ ನಡೆಯುಂತಾಗಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಲಾಪ ವ್ಯರ್ಥವಾಗುವುದನ್ನು ಸಹಿಸಲಾಗದು. ಭ್ರಷ್ಟಾಚಾರ ನಿರ್ಮೂಲನೆಗೆ ಸರಕಾರ ಬದ್ಧವಾಗಿದೆ ಎಂದು ಪ್ರಧಾನಿ ಸಿಂಗ್ ಹೇಳಿದರು.
ಜೆಪಿಸಿ ರಚನೆಗೆ ಶೀಘ್ರವೇ ನಿಲುವಳಿ ಮಂಡಿಸುವುದಾಗಿ ಹೇಳಿದ ಪ್ರಧಾನಿ ಸಿಂಗ್, ತತ್ಸಂಬಂಧ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸ್ಪೀಕರ್ ಮೀರಾಕುಮಾರ್‌ಗೆ ಮನವಿ ಮಾಡಿದರು. ಸರಕಾರದ ನಿಲುವನ್ನು ಸ್ವಾಗತಿಸಿದ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಪ್ರಧಾನಿ ಸಿಂಗ್ ಮತ್ತು ಲೋಕಸಭೆ ನಾಯಕ ಪ್ರಣಬ್ ಮುಖರ್ಜಿ ಅವರಿಗೆ ವಂದನೆ ಸಲ್ಲಿಸಿದರು.
'ಸರಕಾರವು ಪ್ರತಿಪಕ್ಷಗಳ ಜೆಪಿಸಿ ಬೇಡಿಕೆ ಮಣಿದಿರುವುದನ್ನು ನಮ್ಮ ಜಯ ಎಂದು ಬಣ್ಣಿಸಲಾರೆ. ಬದಲಿಗೆ ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ. ನಾವೆಲ್ಲ ಈಗ ಒಟ್ಟಿಗೆ ಕೆಲಸ ಮಾಡಬೇಕಾದ ಜರೂರತ್ತಿದೆ' ಎಂದು ಸುಷ್ಮಾ ಹೇಳಿದರು.












Click it and Unblock the Notifications