ಮಂಗಳೂರು: ನೈಟಿಯಲ್ಲೇ ಶಿಕ್ಷಕಿ ಲಕ್ಷ್ಮಿಪರಾರಿ

ಮಂಗಳೂರಿನ ಹೊರವಲಯದ ನೀರ್‌ಮಾರ್ಗ-ಬೊಂಡಂತಿಲ ಗ್ರಾಮದ ಪಡುಮೂಡಾಯಿಬೆಟ್ಟು ಎಂಬಲ್ಲಿ ಯುವತಿ ನಡುರಾತ್ರಿಯ ವೇಳೆ ಉಟ್ಟಿದ್ದ ನೈಟಿಯಲ್ಲೇ ಮನೆಬಿಟ್ಟು ಪರಾರಿಯಾದ ಘಟನೆ ನಿಧಾನವಾಗಿ ಲವ್ ಅಂಡ್ ಎಸ್ಕೇಪ್ ಕೇಸ್ ಆಗುತ್ತಿದೆ. ಯುವತಿ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಮನೆಬಿಟ್ಟು ಪ್ರೇಮಿಯ ಜತೆ ತೆರಳಿರಬೇಕೆಂದು ಶಂಕಿಸಿ ಕಂಕನಾಡಿ ಪೊಲೀಸರಿಗೆ ಆಕೆಯ ಪೋಷಕರು ದೂರಿದ್ದಾರೆ.
ಗುರುವಪ್ಪ ಎಂಬವರ ಪುತ್ರಿ ಧನಲಕ್ಷ್ಮಿ(23) ದಿನಾಂಕ ಫೆ.18ರಂದು ರಾತ್ರಿ ಮನೆಮಂದಿಯ ಜತೆ ಊಟ ಮಾಡಿ ಮಲಗಿದ್ದು, ಮಧ್ಯರಾತ್ರಿ ಮನೆ ಮಂದಿ ನೋಡುವಾಗ ನಾಪತ್ತೆಯಾಗಿದ್ದಾರೆ. ಧನಲಕ್ಷ್ಮಿ ಮನೆಯಿಂದ ಹೋಗುವಾಗ ಯಾವುದೇ ವಸ್ತುವನ್ನು ಕೊಂಡು ಹೋಗದೇ ಇದ್ದು, ಎಲ್ಲಾ ಕಡೆ ಹುಡುಕಾಡಿ ಸಿಗದೇ ಇದ್ದಾಗ ಪೊಲೀಸರಿಗೆ ದೂರು ನೀಡಲಾಗಿದೆ.
ಯುವತಿ ಸ್ಥಳೀಯ ಕ್ರೈಸ್ತ ಸಮುದಾಯಕ್ಕೆ ಸೇರಿರುವ ಪ್ರವೀಣ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನ ಜತೆ ತೆರಳಿರಬೇಕೆಂದು ಶಂಕೆ ವ್ಯಕ್ತವಾಗಿದೆ. ಈಕೆ ವಾಮಂಜೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಾಪತ್ತೆ ಪ್ರಕರಣ ಕುತೂಹಲ ಕೆರಳಿಸಿದೆ.












Click it and Unblock the Notifications