ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಸ್ತ್ರಚಿಕಿತ್ಸೆ ಇಲ್ಲದೆ ಬೆನ್ನುಹುರಿಗೆ ಚಿಕಿತ್ಸೆ

By Srinath
|
Google Oneindia Kannada News

stethoscope
ಬೆಂಗಳೂರು, ಫೆ.21: ತೀವ್ರ ಬೆನ್ನು ಹುರಿ ಸಮಸ್ಯೆಗೆ (ಡಿಸ್ಕ್ ಪ್ರೊಲ್ಯಾಪ್ಸ್) ಶಸ್ತ್ರಚಿಕಿತ್ಸೆ ಇಲ್ಲದೆಯೇ ಕೆಲವೇ ಗಂಟೆಗಳಲ್ಲಿ ಚಿಕಿತ್ಸೆ ನೀಡುವ disk nucleoplasty ವಿಧಾನವನ್ನು ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಬಳಸಿದ್ದಾರೆ. ಆಸ್ಪತ್ರೆಯಲ್ಲಿ ಇದುವರೆಗೆ 30 ಮಂದಿಗೆ ಈ ಚಿಕಿತ್ಸೆ ನೀಡಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬೆನ್ನು ಹುರಿ ಸಮಸ್ಯೆಯಿಂದ ಬಳಲುವವರ ಸಖ್ಯೆ ಹೆಚ್ಚುತ್ತಿದೆ. ಹಾಗಾಗಿ, ಡಿಸ್ಕ್ ಪ್ರೊಲ್ಯಾಪ್ಸ್ ಸಮಸ್ಯೆಯನ್ನು ನೂತನ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸಬಹುದಾಗಿದೆ' ಎಂದು ಆಸ್ಪತ್ರೆಯ ಉಪಾಧ್ಯಕ್ಷ ಡಾ. ಎನ್.ಕೆ. ವೆಂಕಟರಮಣ ಭಾನುವಾರ ತಿಳಿಸಿದ್ದಾರೆ.

ಡಿಸ್ಕ್ ಪ್ರೊಲ್ಯಾಪ್ಸ್ ತೊಂದರೆ ಇದ್ದರೆ ಸೊಂಟ ಮತ್ತು ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ತಲೆನೋವು, ಜೋಮು ಹಿಡಿಯುವುದು, ದೌರ್ಬಲ್ಯ ಕಾಣಿಸಿಕೊಳ್ಳುವುದು, ನಡಿಗೆ ಮತ್ತಿತರ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ಶೇ. 10ರಷ್ಟು ಮಂದಿ ಸ್ಲಿಪ್ಡ್ ಡಿಸ್ಕ್ ತೊಂದರೆಯಿಂದ ಬಳಲುತ್ತಾರೆ ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.

'ಈ ವಿಧಾನದಲ್ಲಿ ಬೆನ್ನುಹುರಿಯ ಮಧ್ಯಭಾಗಕ್ಕೆ ಸ್ಟೈನಲ್ ವ್ಯಾಂಡ್ ಇಳಿಸಿ ರೇಡಿಯೊ ವಿಕಿರಣಗಳನ್ನು ಹರಿಸಲಾಗುತ್ತದೆ. ಇದರಿಂದ ಬೆನ್ನುಹುರಿ ಒಳಭಾಗ ಸಂಕುಚಿತಗೊಂಡು ಕೊಂಡಿಗಳು ಉತ್ತಮವಾಗಿ ಸ್ವಸ್ಥಾನದಲ್ಲಿ ಜೋಡಣೆಯಾಗುತ್ತವೆ. ಇದರಲ್ಲಿ ಹೆಚ್ಚು ನೋವು ಇರುವುದಿಲ್ಲ. ಕೆಲವೇ ಗಂಟೆಗಳಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಈ ಚಿಕಿತ್ಸೆಗೆ 40,000 ರುಪಾಯಿ ವೆಚ್ಚವಾಗಲಿದೆ' ಎಂದು ಅವರು ವಿವರಿಸಿದರು.

English summary
BGS Global Hospitals here on Sunday inaugurated its percutaneous day care treatment services for cervical and lumbar disc prolapse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X