ಕನ್ನಡದಲ್ಲಿ ಎಚ್ ಡಿಎಫ್ ಸಿ MF ಖಾತೆ ವಿವರ
ಬೆಂಗಳೂರು,
ಫೆ.21: ಬ್ಯಾಂಕ್ ಜೊತೆ ಗ್ರಾಹಕರು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವುದರಿಂದ ಬ್ಯಾಂಕ್ ಗೆ ಉತ್ತಮ ಲಾಭ ಹಾಗೂ ಗ್ರಾಹಕರೊಡನೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯ ಎಂಬ ಸತ್ಯವನ್ನು ಎಚ್ ಡಿಎಫ್ ಸಿ ಬ್ಯಾಂಕ್ ತಡವಾಗಿಯಾದರೂ ಅರಿತಿದೆ. ತನ್ನ ವಿದ್ಯುನ್ಮಾನ ವ್ಯವಹಾರಿಕ ಖಾತೆ ವಿವರಗಳನ್ನು ಕನ್ನಡ ಸೇರಿದಂತೆ ಭಾರತ ವಿವಿಧ ಭಾಷೆಗಳಲ್ಲಿ ಎಚ್ ಡಿಎಫ್ ಸಿ ನೀಡುತ್ತಿದೆ. id="toptextpromo">ಎಚ್
ಡಿಎಫ್ ಸಿಯ ಮ್ಯೂಚಿಯಲ್ ಫಂಡ್ ಮಲ್ಟಿಲಿಂಗ್ಯುಯಲ್ ಖಾತೆ ವಿವರಗಳ ಹೇಳಿಕೆಗಳನ್ನು ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು, ಗುಜರಾತಿ, ಮಲಯಾಳಂ, ಹಾಗೂ ಬಾಂಗ್ಲಾದಲ್ಲೂ ಪಡೆಯಬಹುದಾಗಿದೆ. ಗ್ರಾಹಕ ಸ್ನೇಹಿಯಾದ ಈ ಯೋಜನೆ ಮೂಲಕ ಖಾತೆ ವಿವರಗಳು ಹೆಚ್ಚು ಸ್ಪುಟವಾಗಿ, ಸರಳವಾಗಿ ಗ್ರಾಹಕರಿಗೆ ನೀಡಬಹುದಾಗಿದೆ. ಅಲ್ಲದೆ ದಿನದ 24 ಗಂಟೆಗಳ ಕಾಲವೂ ಈ ಸೌಲಭ್ಯವನ್ನು ಆನ್ ಲೈನ್ ಮೂಲಕ ಬಳಸಿಕೊಳ್ಳಬಹುದಾಗಿದೆ. id='are-slot-1' class='oiad oi-axt oiadv'> id='top-searched-articles'>ಮ್ಯೂಚಿಯಲ್
ಫಂಡ್ ಯೂನಿಟ್ ವುಳ್ಳವರು ಆನ್ ಲೈನ್ ಮೂಲಕ ಖಾತೆ ವಿವರಗಳನ್ನು ವೀಕ್ಷಿಸಬಹುದು. ತಮ್ಮ ಖಾತೆ ಇಮೇಲ್ ಐಡಿಗೆ ಕಳಿಸಿಕೊಳ್ಳಬಹುದು. ಇನ್ನೇಕೆ ತಡ, ನಿಮ್ಮ ಖಾತೆಗೆ ಈ ಸೌಲಭ್ಯವಿಲ್ಲದಿದ್ದರೆ ತಕ್ಷಣವೇ ನಿಮ್ಮ ಸಮೀಪದ ಎಚ್ ಡಿಎಫ್ ಸಿ ಮ್ಯೂಚಿಯಲ್ ಫಂಡ್ ಕೇಂದ್ರಕ್ಕೆ ಭೇಟಿ ಕೊಟ್ಟು ನಿಮ್ಮ ಆಯ್ಕೆಯ ಭಾಷೆಯನ್ನು ತಿಳಿಸಿರಿ ಹಾಗೂ ಸ್ಥಳೀಯ ಭಾಷೆಯಲ್ಲೇ ವಿವರಗಳನ್ನು ಪಡೆಯಿರಿ.











Click it and Unblock the Notifications