ಹೇಮಾ ಕಣದಲ್ಲಿ : ಗಡ್ಕರಿ ವಿರುದ್ಧ ಕರವೇ ಘೇರಾವೋ

ನಿತಿನ್ ಗಡ್ಕರಿಯವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರನ್ನು ಘೇರಾವೋ ಮಾಡಿದ ಕರವೇ ಕಾರ್ಯಕರ್ತರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಗಿಳಿದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಕರ್ನಾಟಕದಲ್ಲಿ ಹಿಂದಿ ದಬ್ಬಾಳಿಕೆಯನ್ನು ಖಂಡಿಸುತ್ತೇವೆ. ರಾಜ್ಯಸಭೆಗೆ ಕನ್ನಡದವರನ್ನು ಕಣಕ್ಕೆ ಇಳಿಸಬೇಕಾಗಿತ್ತು. ಆದರೆ, ಹಿಂದಿ ಚಿತ್ರತಾರೆ ಹೇಮಾಮಾಲಿನಿಯವರನ್ನು ಆಯ್ಕೆ ಮಾಡಿರುವುದು ಖಂಡನೀಯ ಎಂದು ನುಡಿದರು.
ರಾಜಶೇಖರ ಮೂರ್ತಿ ಅವರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ಅವರ ಹೆಸರು ಕೇಳಿಬಂದಿತ್ತು. ಈಗ ಹೇಮಾಮಾಲಿನಿಯವರನ್ನು ಆಯ್ಕೆ ಮಾಡಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಆಕ್ರೋಶಕ್ಕೆ ಕಾರಣವಾಗಿತ್ತು.
ನಿತಿನ್ ಮೆರವಣಿಗೆ : ಕರ್ನಾಟಕದಲ್ಲಿ ಸಾವಿರ ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಇಂದು ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶಕ್ಕೆ ತೆರೆದ ವಾಹನದಲ್ಲಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ, ನಿತಿನಿ ಗಡ್ಕರಿಯವರನ್ನು ಕರೆತರಲಾಯಿತು.
ಭಾನುವಾರ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರಿಗೆ ರಜಾ ಎಂಬುದೇ ಇಲ್ಲ. ಇತ್ತ ಬೆಂಗಳೂರಿನಲ್ಲಿ ಬಿಜೆಪಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದರೆ, ಅತ್ತ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ 'ನಾಡ ರಕ್ಷಣಾ' ಸಮಾವೇಶ ಹಮ್ಮಿಕೊಂಡಿದೆ.
ಇತ್ತೀಚೆಗೆ ತಾನೆ ಮುಗಿದ ಐದು ದಿನಗಳ ಏರೋ ಇಂಡಿಯಾ 2011 ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ನ ರುಚಿಯನ್ನು ಕಂಡಿದ್ದ ಬಳ್ಳಾರಿ ರಸ್ತೆ ನಾಗರಿಕರು, ಇಂದು ಭಾನುವಾರ ಕೂಡ ಜಾಮ್ ರುಚಿಯನ್ನು ತಿಂದು ಅಸಹ್ಯವಾಗಿ ಮುಖ ಕಿವುಚಿಕೊಳ್ಳುತ್ತಿದ್ದಾರೆ.












Click it and Unblock the Notifications