ಆಪಲ್ ಜನಕ ಸ್ಟೀವ್ಸ್ ಜಾಬ್ಸ್ ಸಾವಿನಂಚಿನತ್ತ
ನ್ಯೂಯಾರ್ಕ್,
ಫೆ.18: ಸಾಫ್ಟ್‌ವೇರ್ ದಿಗ್ಗಜ ಆಪಲ್ ಸಂಸ್ಥೆಯ ಮುಖ್ಯಸ್ಥ ಸ್ಟೀವ್ ಜಾಬ್ಸ್ (55) ಅವರು ಇನ್ನು ಆರು ವಾರ ಕಾಲ ಮಾತ್ರವೇ ಬದುಕಲಿದ್ದಾರೆ. ಆಪಲ್ ಸಂಸ್ಥಾಪಕ ಜಾಬ್ಸ್ ಅವರು ಕ್ಯಾಲಿಫೋನಿರ್ಯಾದ ಸ್ಟ್ಯಾನ್‌ಫೋರ್ಡ್ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಹೊರಗೆ ಕಾಣಿಸಿಕೊಂಡಿದ್ದು, ತೀರಾ ಸೊರಗಿ ಹೋಗಿದ್ದರು ಎಂದು ನ್ಯಾಷನಲ್ ಎನ್‌ಕ್ವೈರರ್ ಪತ್ರಿಕೆ ಅವರ ಚಿತ್ರಗಳನ್ನು ಪ್ರಕಟಿಸಿ ವರದಿ ಮಾಡಿದೆ. id="toptextpromo">ಜಾಬ್ಸ್
ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಇಂಟರ್‌ನೆಟ್ ಜಾಲಗಳಲ್ಲಿ ಗುರುವಾರದಿಂದ ವ್ಯಾಪಕವಾಗಿ ಹರಿದಾಡುತ್ತಿದೆ. ಜಾಬ್ಸ್ ತೀರಾ ತೆಳ್ಳಗಾಗಿದ್ದು, ಕಳಾಹೀನಗೊಂಡಿದ್ದಾರೆ. ಅವರು ಚಿಕಿತ್ಸಾ ಕೇಂದ್ರಕ್ಕೆ ನಿಯಮಿತವಾಗಿ ಭೇಟಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇತರೆ ಮಾಧ್ಯಮಗಳೂ ವರದಿ ಮಾಡಿವೆ. id='are-slot-1' class='oiad oi-axt oiadv'> id='top-searched-articles'>ಜಾಬ್ಸ್
ಸಾವಿನಂಚಿಗೆ ತಲುಪಿದ್ದಾರೆ ಎಂದು ಅವರ ಭಾವಚಿತ್ರಗಳನ್ನು ನೋಡಿದ ತೀವ್ರ ನರರೋಗ ಚಿಕಿತ್ಸಾ ತಜ್ಞ ಡಾ. ಸ್ಯಾಮ್ಯುಲ್ ಜಾಕೋಬ್‌ಸನ್ ಅಭಿಪ್ರಾಯಪಟ್ಟಿದ್ದಾರೆ. ಜಾಬ್ಸ್ ಹೆಚ್ಚೆಂದರೆ 6 ವಾರ ಕಾಲ ಬದುಕಬಹುದಷ್ಟೇ ಎಂದು ಅವರು ಹೇಳಿದ್ದಾರೆ.











Click it and Unblock the Notifications