ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಮೆರಿಕನಸು' ಕಾದಂಬರಿ ಲೋಕಾರ್ಪಣೆ ಸಮಾರಂಭ

By Srinath
|
Google Oneindia Kannada News

Amerikanasu
ಬೆಂಗಳೂರು, ಫೆ.17: ಕನ್ನಡ ದಾಸ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ವಿಹರಿಸುತ್ತಿರುವ ಲಾಸ್ ಏಂಜಲಿಸ್‌ನ ಡಾ.ರಾಘವ ರೆಡ್ಡಿ ಅವರ ಸತ್ಯ ಕಥೆ ಆಧರಿತ 'ಅಮೆರಿಕನಸು' ಕಾದಂಬರಿಯು ಗುರುವಾರ ಸಂಜೆ 7 ಗಂಟೆಗೆ (ಫೆ.17) ಬಿಡುಗಡೆಯಾಗಲಿದೆ. ಸ್ಥಳ: ಟೋಟಲ್ ಕನ್ನಡ ಮಳಿಗೆ (ಜಯನಗರದ ಪವಿತ್ರ ಹೋಟೆಲ್ ಎದುರು). ಜಯನಗರದ ಶಿವಾನಂದ ಪ್ರಕಾಶನ ಕೃತಿಯನ್ನು ಹೊರತಂದಿದೆ.

ಕವಿ. ವಿಧಾನ ಪರಿಷತ್ ಸದಸ್ಯ ಪ್ರೊ. ದೊಡ್ಡರಂಗೇಗೌಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.

ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಕೆ.ಆರ್ ಸಂಧ್ಯಾರೆಡ್ಡಿ ಅವರು ಸಮರಂಭದ ಮುಖ್ಯ ಅತಿಥಿಗಳು. ಕೃಷಿ ಇಲಾಖೆಯ ನಿದೇಶಕರಾದ ಡಾ. ಎ. ರಾಜಣ್ಣ ಅವರಿಂದ ವ್ಯಕ್ತಿ ಪರಿಚಯ. ಸಾಹಿತಿ ಡಾ. ಮೋಹನ್‌ಕುಮಾರ್ ಅವರು ಕೃತಿ ಪರಿಚಯ ಮಾಡಲಿದ್ದಾರೆ.

English summary
Amerikanasu a novel by Dr. Raghava Reddy ( Kannada Dasa) will be realeased by writer Nagatihalli Chandra Shekar at Total Kannada Malige in Jayanagar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X