ಅಮೆರಿಕದವನ ಜತೆ ದಾವೂದ್ ದ್ವಿತೀಯ ಪುತ್ರಿ ಮದುವೆ

ಮಹ್ರೀನ್, ಪಾಕ್‌ನಲ್ಲಿ ಜನಿಸಿರುವ ಅಯೂಬ್‌ನನ್ನು ವರಿಸಿದ್ದು ದಾವೂದ್‌ಗೆ ಸೇರಿದ ಅರಮನೆಯಂಥ ಬಂಗ್ಲೊದಲ್ಲಿ ಫೆಬ್ರವರಿ 4ರಂದು ಸರಳ ಆರತಕ್ಷತೆ ನಡೆದಿದೆ. ಪಾಕಿಸ್ತಾನದ ಸೇನಾಧಿಕಾರಿಗಳು ಮತ್ತು ಐಎಸ್‌ಐ ಅಧಿಕಾರಿಗಳು ನಿಖಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಾಜಿ ಕ್ರಿಕೆಟ್ಟಿಗ ಜಾವೇದ್ ಮಿಯಾಂದಾದ್ ಸಹ ವಿವಾಹ ಸಮಾರಂಭದಲ್ಲಿ ಪರವಾರ ಸಮೇತ ಭಾಗಿಯಾಗಿದ್ದರು. ಈ ಹಿಂದೆ, ಮಿಯಾಂದಾದ್ ಪುತ್ರ ದಾವೂದ್‌ನ ಮೊದಲ ಪುತ್ರಿ ಮಹರೂಫ್‌ಳನ್ನು ವಿವಾಹವಾಗಿದ್ದಾನೆ. ದಾವೂದ್‌ನ ಸೋದರರು ಮತ್ತು ಛೋಟಾ ಶಕೀಲ್ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ದಾವೂದ್‌ಗೆ ಹೃದಯಾಘಾತ:
ವಾಸ್ತವವಾಗಿ ದಾವೂದ್ ತನ್ನ ಮಗಳ ನಿಖಾವನ್ನು ಮೇ ತಿಂಗಳಲ್ಲಿ ನೆರವೇರಿಸಲು ನಿರ್ಧರಿಸಿದ್ದ. ಆದರೆ ದಾವೂದ್‌ಗೆ ಇತ್ತೀಚೆಗೆ ತೀವ್ರ ಹೃದಯಾಘಾತವಾಗಿ ವಿವಾವನ್ನು ಮೂರು ತಿಂಗಳ ಮುಂಚೆಯೇ ಮಾಡಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಬಹು ಕಾಲದಿಂದ ದುಬೈ ದಾವೂದ್‌ನ ಕಾರಸ್ಥಾನವಾಗಿತ್ತು. ಆದರೆ 9/11ರ ದಾಳಿಯ ನಂತರ ಅಮೆರಿಕ ದಾವೂದ್‌ನನ್ನು 'ಜಾಗತಿಕ ಭಯೋತ್ಪಾದಕ' ಎಂದು ಸಾರಿದೆ. ಆದ್ದರಿಂದ ಕರಾಚಿಯಲ್ಲಿ ಛದ್ಮವೇಶದಲ್ಲಿ ಜೀವನ ನಡೆಸುತ್ತಿದ್ದಾನೆ. ಅವನಿಗೆ ಐಎಸ್‌ಐ ರಕ್ಷಾಕವಚ ಇದೆ ಎಂದು ಮುಂಬಯಿಯ ಉನ್ನತ ಪೊಲೀಸ್ ಮೂಲಗಳು ಇದೇ ಸಂದರ್ಭದಲ್ಲಿ ತಿಳಿಸಿವೆ.
1993ರ ಮುಂಬಯಿ ಸರಣಿ ಸ್ಫೋಟ ನಡೆಸಿ ಕರಾಚಿಗೆ ಪರಾರಿಯಾದ ದಾವೂದ್‌ನನ್ನು ಹಸ್ತಾಂತರಿಸುವಂತೆ ಭಾರತ ಸರಕಾರ ಪಾಕ್ ತಿದಿಯೊತ್ತುಲೇ ಇದೆ. ಪಾಕ್ ನಿರುತ್ತರವಾಗಿದೆ. 300 ಮಂದಿಯನ್ನು ಆಹುತಿ ತೆಗೆದುಕೊಂಡ ಸರಣಿ ಸ್ಫೋಟದ ಬಳಿಕ ದಾವೂದ್ ತನ್ನ ಪತ್ನಿ, ನಾಲ್ವರು ಪುತ್ರಿಯರು, ಒಬ್ಬ ಪುತ್ರ ಮತ್ತು ನಿಕಟ ಬಂಧುಗಳನ್ನು ಕರಾಚಿಗೆ ತಲುಪಿಸುವಲ್ಲಿ ಯಶಸ್ವಿಯಾದ. ಆದರೆ ಒಬ್ಬ ಮಗಳು ಪಾಕ್‌ನಲ್ಲಿ ಮಲೇರಿಯಾಗೆ ತುತ್ತಾದಳು.












Click it and Unblock the Notifications