ತಲೆಮರೆಸಿಕೊಂಡ ಆರೋಪಿ ಜಮೀರ್ ಬಂಧನ ಸನ್ನಿಹಿತ

ಚಾಮರಾಜಪೇಟೆ ಶಾಸಕ ಹಾಗೂ ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್, 3ನೇ ಬ್ಲಾಕ್‌ನ ನಂ. 607ರ ನಿವಾಸಿಯಾದ ಬಿ.ಝಡ್. ಜಮೀರ್ ಅಹಮದ್ ಖಾನ್, ಅವರ ಬೆಂಬಲಿಗ ಹಾಗೂ ಇತ್ತೀಚೆಗೆ ಕೊಲೆಯಾದ ಪಾಲಿಕೆ ಸದಸ್ಯ ದಿವಾನ್ ಅಲಿ ಸೇರಿ ಒಟ್ಟು 13 ಮಂದಿ ಈ ದರೋಡೆ ನಡೆಸಿದ್ದರು.
ಇದು ಕ್ರಿಮಿನಲ್ ಪ್ರಕರಣವಾಗಿದ್ದು, ಆರೋಪಪಟ್ಟಿಯಲ್ಲಿ ಜಮೀರ್‌ರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ನಮೂದಿಸಿರುವುದರಿಂದ ನ್ಯಾಯಾಲಯ ತಕ್ಷಣ ವಾರಂಟ್ ಜಾರಿಗೊಳಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ಜಮೀರ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಕ್ಷಣಕ್ಕೆ ವಾಸ್ತವ್ಯ ಹೂಡುವುದು ಅನಿವಾರ್ಯವಾಗಲಿದೆ.
ಏನಿದು ಪ್ರಕರಣ: ಅಕ್ಕಿ ವ್ಯಾಪಾರಿ ಜಿಯಾವುಲ್ಲಾ ಖಾನ್ ಗೋರಿ ಎಂಬವರು ಅ. 10ರಂದು ಚನ್ನಪಟ್ಟಣದಿಂದ ಬೆಂಗಳೂರಿಗೆ ಇನೋವಾ ಕಾರಿನಲ್ಲಿ ಬರುತ್ತಿದ್ದರು. ಮತ್ತೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸಿದ ಆರೋಪಿಗಳು ಕೆಂಗೇರಿ ಬಳಿಯ ಜಯರಾಮ್‌ದಾಸ್ ಕೈಗಾರಿಕೆ ಪ್ರದೇಶದಲ್ಲಿ ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಜಿಯಾವುಲ್ಲಾ ಅವರನ್ನು ಬೆದರಿಸಿದ್ದ ಆರೋಪಿಗಳು 50 ಲಕ್ಷ ರು. ದರೋಡೆ ಮಾಡಿ ಪರಾರಿಯಾಗಿದ್ದರು.
ಜಿಯಾವುಲ್ಲಾ ಕೆಲವು ಆರೋಪಿಗಳನ್ನು ಗುರುತಿಸಿದ್ದರು. ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ದರೋಡೆಯ ಹಿಂದೆ ಜಮೀರ್ ಮತ್ತು ದಿವಾನ್ ಅಲಿಯ ಪಾತ್ರ ಇರುವುದನ್ನು ಬಂಧಿತರು ಪೊಲೀಸರಿಗೆ ಬಹಿರಂಗಪಡಿಸಿದ್ದರು. ಆರೋಪಿಗಳು ತಮ್ಮ ಹೆಸರನ್ನು ಬಹಿರಂಗಪಡಿಸಿರುವುದು ಗೊತ್ತಾಗುತ್ತಿದ್ದಂತೆ ನ್ಯಾಯಾಲಯದಿಂದ ಅಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ದರೋಡೆ ಬಳಿಕ ಆರೋಪಿಗಳು ಜಮೀರ್‌ಗೆ ಫೋನ್ ಮಾಡಿ 'ವಹಿಸಿದ್ದ ಕೆಲಸ ಸಕ್ಸಸ್ ಆಗಿದೆ' ಎಂದು ಹೇಳಿದ್ದರು. ಜತೆಗೆ ಇನ್ನೂ ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳನ್ನು ಕಲೆಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೇರೆಯೇ ಹಿನ್ನೆಲೆ ! : ಮೂಲಗಳ ಪ್ರಕಾರ ಪ್ರಕರಣದ ಹಿನ್ನೆಲೆಯೇ ಬೇರೆ ಇದೆ. ಘಟನೆ ನಡೆದಿದ್ದು ಬಿಜೆಪಿ ಸರಕಾರದ ವಿರುದ್ಧ ಬಂಡೆದ್ದ ಶಾಸಕರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಮೀರ್ ಅಹಮದ್ ಗೋವಾದ ಹೋಟೆಲ್‌ನಲ್ಲಿ ಇರಿಸಿದ್ದ ಸಂದರ್ಭದಲ್ಲಿ. ಆಗ ಅಧಿಕಾರ ಉಳಿಸಿಕೊಳ್ಳಲು ಸರಕಾರ ಆಪರೇಷನ್ ಕಮಲಕ್ಕೆ ಕೈಹಾಕಿತ್ತು. ಇದಕ್ಕೆ ಮೊದಲ ಬಲಿ ಚನ್ನಪಟ್ಟಣದ ಶಾಸಕ ಎಂ.ಸಿ. ಅಶ್ವತ್ಥ್. ಸಚಿವರೊಬ್ಬರು ಇದಕ್ಕಾಗಿ 2.5 ಕೋಟಿ ರು. ಕಪ್ಪು ಹಣವನ್ನು ಕಳಿಸಿಕೊಟ್ಟಿದ್ದರು.
ಈ ಹಣವನ್ನು ಅಶ್ವತ್ಥ್ ಅವರ ಆಪ್ತ ಜಿಯಾವುಲ್ಲಾ ಇನೋವಾದಲ್ಲಿ ತೆಗೆದುಕೊಂಡು ವಿಜಯನಗರದಲ್ಲಿರುವ ಮನೆಗೆ ಬರುತ್ತಿರುವ ಮಾಹಿತಿಯನ್ನು ಫರೀದ್ ಖಾನ್, ಶಾಸಕ ಜಮೀರ್‌ಗೆ ರವಾನಿಸಿದ್ದ. ಜಮೀರ್ ಮೊಬೈಲ್ ಮೂಲಕ ಅಲಿಗೆ ಕರೆ ಮಾಡಿ ರೂಪಿಸಿದ ಸಂಚಿನಿಂದ 2.5 ಕೋಟಿ ರು. ಅಪಹರಿಸಲಾಗಿತ್ತು. ಆದರೆ ದೂರಿನಲ್ಲಿ ಇದ್ಯಾವ ಅಂಶವೂ ಇಲ್ಲ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications