ಚಿನ್ನಸ್ವಾಮಿ ಕ್ರೀಡಾಂಗಣ ಸರ್ವ ಸನ್ನದ್ಧ:ಕುಂಬ್ಳೆ

ಬೆಂಗಳೂರು, ಫೆ.1: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದ್ದೇವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಕಿರುವ ಈ ಅವಕಾಶ ಅನಿರೀಕ್ಷಿತವಾದರೂ, ಕೆಎಸ್ ಸಿಎ ತ್ವರಿತವಾಗಿ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸರ್ವ ಸನ್ನದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ಹೇಳಿದ್ದಾರೆ.

ನಿಗದಿತ ವೇಳಾಪಟ್ಟಿಯಂತೆ ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಆತಿಥ್ಯ ವಹಿಸುವ ಅವಕಾಶ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಭಿಸಿದೆ. ಈ ಬಗ್ಗೆ ಐಸಿಸಿ ಅಧಿಕೃತವಾಗಿ ನೀಡಿರುವ ಆದೇಶ ಕೆಎಸ್ ಸಿಎ ತಲುಪಿದೆ. ಫೆ. 27 ರಂದು ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಪಂದ್ಯ ನಡೆಯಲಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2011 ವೇಳಾಪಟ್ಟಿ

ಫೆ.13 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯ ನಡೆಯಲಿದೆ. ಆ ಪಂದ್ಯವನ್ನು ಮುಂದಿಟ್ಟುಕೊಂಡು ನಮ್ಮ ಸಿದ್ಧತೆಗಳು ನಡೆಯುತ್ತಿವೆ. ಆದ್ದರಿಂದ ಭಾರತ ಹಾಗೂ ಇಂಗ್ಲೆಂಡ್ ಪಂದ್ಯವನ್ನು ನಡೆಸಲು ಯಾವುದೇ ತೊಡಕಾಗದು. ಹೊಸ ಪ್ರೆಸ್ ಬಾಕ್ಸ್ ಒಳಗೊಂಡಂತೆ ಕ್ರೀಡಾಂಗಣದ ಕೆಲವು ಭಾಗಗಳಲ್ಲಿ ಸಣ್ಣಪುಟ್ಟ ನವೀಕರಣ ಕಾರ್ಯ ಕೆಲಸ ಭರದಿಂದ ಸಾಗಿದೆ ಎಂದು ಕುಂಬ್ಳೆ ಹೇಳಿದರು.

ಒಟ್ಟು ಐದು ಪಂದ್ಯ: ವಿಶ್ವಕಪ್ ಟೂರ್ನಿಯ ಐದು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದಲ್ಲದೆ ಎರಡು ಅಭ್ಯಾಸ ಪಂದ್ಯಗಳಿಗೆ ಉದ್ಯಾನನಗರಿ ಮೈದಾನ ಒದಗಿಸಲಿದೆ. ಫೆ. 13 ರಂದು ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಹಾಗೂ ಫೆ. 15 ರಂದು ನಡೆಯುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಹೋರಾಟ ನಡೆಸಲಿದೆ.

ಭಾರತದ ಎರಡು ಪಂದ್ಯಗಳನ್ನು ನೇರವಾಗಿ ವೀಕ್ಷಿಸುವ ಅವಕಾಶ ಬೆಂಗಳೂರಿನ ಜನತೆಗೆ ಲಭಿಸಿದೆ. ಮಾ. 6 ರಂದು ನಡೆಯುವ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಇದಲ್ಲದೆ ಇಂಗ್ಲೆಂಡ್ ಹಾಗೂ ಐರ್ಲೆಂಡ್ (ಮಾ. 2), ಆಸ್ಟ್ರೇಲಿಯಾ ಹಾಗೂ ಕೀನ್ಯಾ (ಮಾ. 13), ಆಸ್ಟ್ರೇಲಿಯಾ ಹಾಗೂ ಕೆನಡಾ (ಮಾ. 16) ತಂಡಗಳು ಇಲ್ಲಿ ಪರಸ್ಪರ ಕಾದಾಡಲಿವೆ. [ಐಸಿಸಿ ವಿಶ್ವಕಪ್ 2011]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+