ಭೂಸ್ವಾಧೀನ : ಬಿಡಿಎಗೆ ಹೈಕೋರ್ಟ್ ತರಾಟೆ

ಬೇಕೆಂದಾಗ ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಬಿಡಿಎ ಒಂದು ರೀತಿಯಲ್ಲಿ ರಿಯಲ್ ಏಜೆಂಟ್ ನಂತೆ ವರ್ತಿಸತೊಡಗಿದೆ. ನೀವು ಎಷ್ಟೇ ಬಡಾವಣೆಗಳನ್ನು ನಿರ್ಮಿಸಿ ಒಂದನ್ನು ಪೂರ್ಣಗೊಳಿಸಿದ ನಂತರ ಮತ್ತೊಂದನ್ನು ಕೈಗೆತ್ತಿಕೊಳ್ಳಿ ಎಂದು ನ್ಯಾಯಮೂರ್ತಿ ಡಿವಿ ಶೈಲೆಂದ್ರಕುಮಾರ್ ಅವರಿದ್ದ ಏಕಸದಸ್ಯ ಪೀಠ ಸ್ಪಷ್ಟ ನಿರ್ದೇಶನ ನೀಡಿದೆ.
ಕೆಂಪೇಗೌಡ ಬಡಾವಣೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಬಡಾವಣೆಗಳ ನಿರ್ಮಾಣಕ್ಕೆ ಬಿಡಿಎ ಎಷ್ಟು ಯೋಜನೆಗಳನ್ನು ಪ್ರಸ್ತುತ ಜಾರಿಗೊಳಿಸುತ್ತಿದೆ. ಈಗಾಗಲೇ ಆರಂಭಿಸಲಾಗಿರುವ ಬಡಾವಣೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿಲ್ಲ. ಹೀಗಿರುವಾಗ ಕೆಂಪೇಗೌಡ ಬಡಾವಣೆ ಎಂಬ ಬೃಹತ್ ಯೋಜನೆಗೆ ಬಿಡಿಎ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದೀರಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಒಂದು ಬಡಾವಣೆ ನಿರ್ಮಾಣ ಕಾರ್ಯವನ್ನು ಅರ್ಧಕ್ಕೆ ಕೈಬಿಟ್ಟು ಇನ್ನೊಂದು ಬಡಾವಣೆಯ ಭೂಸ್ವಾಧೀನಕ್ಕೆ ಮುಂದಾಗುತ್ತಿದ್ದೀರಿ. ಅದರ ಬದಲಾಗಿ ಒಂದು ಯೋಜನೆಯನ್ನು ಪೂರ್ಣಗೊಳಿಸಿದ ಬಳಿಕ ಇನ್ನೊಂದು ಯೋಜನೆಯನ್ನು ಕೈಗೆತ್ತಿಕೊಳ್ಳಿ ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.
ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಡಿಎ 2008ರ ಮೇ 21 ರಂದು ಮೊದಲ ಅಧಿಸೂಚನೆ ಹೊರಡಿಸಿತ್ತು. 2010ರ ಫೆಬ್ರವರಿ 18 ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಸುಮಾರು 4,043 ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲು ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯಲ್ಲಿ ಸುಮಾರು 54,800 ಸೈಟ್ ಗಳನ್ನು ನಿರ್ಮಾಣವಾಗಲಿವೆ.












Click it and Unblock the Notifications