ದಿವಾನ್ ಅಲಿ, ಗಾಂಧೀಜಿ ಇಂದಿರಾಗೆ ಸಮ!

Diwan Ali
ಬೆಂಗಳೂರು, ಫೆ. 1 : ಇತ್ತೀಚೆಗೆ ವಿರೋಧಿ ಗುಂಪಿನಿಂದ ಹತ್ಯೆಯಾದ ಬಿಬಿಎಂಪಿ ಸದಸ್ಯ ಹಾಗೂ ಮಾಜಿ ರೌಡಿ ದಿವಾನ್ ಅಲಿ ಮಹಾತ್ಮನಂತೆ, ಅಷ್ಟೆ ಅಲ್ಲ ಜನನಾಯಕರೂ ಆಗಿದ್ದರಂತೆ. ಗಾಂಧೀಜಿ, ಇಂದಿರಾಗಾಂಧಿ ಮತ್ತು ರಾಜೀವ ಗಾಂಧಿ ಅವರಂತೆಯೇ ಸಾರ್ವಜನಿಕ ಸೇವೆ ಸಲ್ಲಿಸಿ ದೇಶದ್ರೋಹಿಗಳಿಂದ ಹತರಾದರಂತೆ!

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಜೆಡಿಎಸ್ ಸದಸ್ಯರೊಬ್ಬರು ದಿವಾನ್ ಅಲಿ ಬಗ್ಗೆ ಮಾಡಿದ ಗುಣಗಾನವಿದು. ವಿಶ್ವಖ್ಯಾತ ಸಂಗೀತ ಸಾಮ್ರಾಟ ಭೀಮಸೇನ ಜೋಶಿ ಅವರನ್ನು ಬಿಜೆಪಿ ಸದಸ್ಯನೊಬ್ಬ ಹೀನಾಮಾನ ನಿಂದಿಸಿರುವುದು ಒಂದಡೆಯಾದರೆ, ಮಾಜಿ ರೌಡಿಯೊಬ್ಬನನ್ನು ಮನಸಾರೆ ಹೊಗಳಿದ ಪ್ರಸಂಗ ಸೋಮವಾರ ನಡೆಯಿತು.

ಸಭೆಯ ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಂ ಅವರು ಅಲಿ ಬಗ್ಗೆ ಪ್ರಶಂಸೆ ಮಾತುಗಳನ್ನಾಡಿದರು. 15 ವರ್ಷಗಳಿಂದ ಪರಿಚಯವಿದ್ದ ಅಲಿ ಜನಪರ ಕೆಲಸಗಳನ್ನು ಮಾಡುತ್ತಿದ್ದರು. ಆದರೆ, ಇಂತಹ ನಾಯಕನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಲೆ ಮಾಡಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೆಂಪೇಗೌಡ ವಾರ್ಡ್ ನ ಸದಸ್ಯ ವೈ ಎನ್ ಅಶ್ವತ್ಥ ಅವರು, ದಿವಾನ್ ಅಲಿ ಜನನಾಯಕ. ಗಾಂಧೀಜಿ, ಇಂದಿರಾ, ರಾಜೀವ ಇದೇ ರೀತಿ ಹತ್ಯೆಯಾದರು. ಅದೇ ಹಾದಿಯಲ್ಲಿ ಸಾಗಿ ಸಮಾಜ ಸೇವೆ ಮಾಡುತ್ತಿದ್ದ ದಿವಾನ್ ಅಲಿ ಹಂತಕರ ಗುಂಡಿಗೆ ಬಲಿಯಾಗಿದ್ದಾರೆ ಎಂದರು. ಅಶ್ವತ್ಥ ಬಿಜೆಪಿ ಸದಸ್ಯರು ಎನ್ನುವುದು ವಿಶೇಷ. ಅಲಿಯನ್ನು ಬಿಜೆಪಿ ಸದಸ್ಯನೊಬ್ಬ ಹೀಗೆ ಹೊಗಳುತ್ತಿರುವುದನ್ನು ಕಂಡ ಪಾಲಿಕೆ ಸದಸ್ಯರೆಲ್ಲರೂ ಕ್ಷಣ ಕಾಲ ತಬ್ಬಿಬ್ಬಾದ ಪ್ರಸಂದ ನಡೆಯಿತು.(ದಿವಾನ್ ಅಲಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+