ಆರೆಸ್ಸೆಸ್ ಕಚೇರಿಯಲ್ಲಿ ಧ್ವಜ ಹಾರಿಸಿ : ಸಿಪಿಐ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಸರಕಾರ ತಡೆಹಿಡಿದ ಬಿಜೆಪಿಯ ತಿರಂಗಾ ಯಾತ್ರೆ ಪ್ರಚೋದನಾಕಾರಿ ಮತ್ತು ರಾಜಕೀಯ ಪ್ರಹಸನ ಎಂದು ಲೇವಡಿ ಮಾಡಿದರು.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವು ಕಾಂಗ್ರೆಸ್ಸೇತರ ಜಾತ್ಯತೀತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ. ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ನೀತಿಯನ್ನು ಟೀಕಿಸಿದ ಅವರು, ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನೊಂದಿಗೆ ತಮ್ಮ ಪಕ್ಷ ಯಾವತ್ತೂ ಕೈ ಜೋಡಿಸುವುದಿಲ್ಲ ಎಂದು ಯೆಚೂರಿ ಸ್ಪಷ್ಟಪಡಿಸಿದರು.
ವಿದೇಶಗಳಲ್ಲಿರುವ ಕಪ್ಪು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಯೋತ್ಪಾದನೆಯ ಆಂತರಿಕ ಮತ್ತು ಬಾಹ್ಯ ಕೊಂಡಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಂಬರುವ ದಿನಗಳಲ್ಲಿ ಇವು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ಸೀತಾರಾಂ ಯೆಚೂರಿ ಕಳವಳ ವ್ಯಕ್ತಪಡಿಸಿದರು.(ಸೀತಾರಾಂ ಯೆಚೂರಿ)











Click it and Unblock the Notifications