ನಂಬಿಕೆ ದ್ರೋಹ: ಗಂಡ, ದಲ್ಲಾಳಿ ವಿರುದ್ಧ ಕೇಸ್
ಕುಂದಾಪುರ,
ಜ.
27:
ಸ್ವಜಾತಿಯವನು
ಎಂದು
ನಂಬಿಸಿ
ಎರಡು
ಮಕ್ಕಳ
ತಂದೆಯಾದವನ
ಕೈಲಿ
ತಾಳಿ
ಕಟ್ಟಿಸಿಕೊಂಡು
ಸುಮಾರು
ವರ್ಷ
ನೋವುಂಡ
ಗೃಹಿಣಿಯೊಬ್ಬಳು,
ಕೊನೆಗೂ
ನ್ಯಾಯ
ದೊರಕಿಸಿಕೊಡುವಂತೆ
ಪೊಲೀಸರ
ಮೊರೆ
ಹೊಕ್ಕಿದ್ದಾಳೆ.
ಜಾತಿ
ಕುಲ
ತಿಳಿಯದ
ವರನನ್ನು
ಮದುವೆಯಾಗುವಂತೆ
ಮಾಡಿದ
ದಲ್ಲಾಳಿ
ಹಾಗೂ
ವರನ
ವಿರುದ್ಧ
ಶಂಕರನಾರಾಯಣ
ಪೊಲೀಸ್
ಠಾಣೆಯಲ್ಲಿ
ಬುಧವಾರ
ದೂರು
ದಾಖಲಾಗಿದೆ.
id="toptextpromo">
ಕುಂದಾಪುರ
ತಾಲೂಕಿನ ಕಳಿನಜೆಡ್ಡುಮನೆ, ಉಳ್ಳೂರು ಗ್ರಾಮದ ರಾಮ ಮೊಗವೀರರ ಪುತ್ರಿ ರತಿ (29) ದೂರು ನೀಡಿದವರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಿರಾಲಿಯ ಚಿತ್ರಾಪುರ ನಿವಾಸಿ ರವೀಂದ್ರ(35) ಎಂಬಾತನನ್ನು ಮದುವೆ ದಲ್ಲಾಳಿ ಅಣ್ಣಪ್ಪ ನಾಯ್ಕ್ ತೋರಿಸಿ ಈತ ಮೊಗವೀರ ಯುವಕ, ಭಾರಿ ಸಭ್ಯ ಎಂದೆಲ್ಲಾ ಕತೆ ಕಟ್ಟಿ ಸೆ. 27, 2009 ರಂದು ಮದುವೆ ಮಾಡಿಸಿದ್ದ. id='are-slot-1' class='oiad oi-axt oiadv'> id='top-searched-articles'>ಮದುವೆಯ
ಸಂದರ್ಭ ವರದಕ್ಷಿಣೆ ರೂಪದಲ್ಲಿ 50 ಸಾವಿರ ರೂ. ನಗದು, ಸರ, ಉಂಗುರ ವರನ ಜೋಳಿಗೆ ಸೇರಿತ್ತು. ಮದುವೆಯ ಬಳಿಕ ಹೆಚ್ಚಿನ ವರದಕ್ಷಿಣೆಗಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಇದೆನ್ನೆಲ್ಲಾ ಕಷ್ಟಪಟ್ಟು ಸಹಿಸಿಕೊಂಡ ರತಿಗೆ ತನ್ನ ಗಂಡ ಸೆಕೆಂಡ್ ಹ್ಯಾಂಡ್ ಈಗಾಗಲೇ ಆತನಿಗೆ ಮದುವೆಯಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದಾನೆ ಎಂದು ತಿಳಿದಾಗ ರೋಷ ಉಕ್ಕಿದೆ. ದಲ್ಲಾಳಿ ಅಣ್ಣಪ್ಪ ನಾಯ್ಕ್ ಹಾಗೂ ಪತಿ ರವೀಂದ್ರ ನನ್ನನ್ನು ನಂಬಿಸಿ ವಂಚನೆ ಎಸಗಿರುವುದಾಗಿ ರತಿ ದೂರಿನಲ್ಲಿ ವಿವರಿಸಿದ್ದಾಳೆ. ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/11 ಕಲಂ ಕಲಂ 420 323 498(ಎ) ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. [ವಂಚನೆ]











Click it and Unblock the Notifications