ಸಿಕ್ಕರು ಅಧಿಕಾರಿಯ ಸಜೀವವಾಗಿ ದಹಿಸಿದ ಠಕ್ಕರು

ಪೆಟ್ರೋಲ್ ಮಾಫಿಯಾದಲ್ಲಿ ಭಾಗಿಯಾಗಿರುವ ಈ ಏಳು ದುರುಳರನ್ನು ಬುಧವಾರ ನಾಸಿಕ್ ಜಿಲ್ಲೆಯ ಮನ್ಮಾದ್ ನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತಿದೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ತೀವ್ರವಾಗಿ ಶೋಧಿಸುತ್ತಿದ್ದಾರೆ.
ಮಾಲೆಗಾಂವ್ ನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿರುವ ಯಶವಂತ್ ಸೋನಾವಾನೆಯವರನ್ನು ಪೆಟ್ರೋಲ್ ಕಳ್ಳಸಾಗಣೆಯಲ್ಲಿ ತೊಡಗಿದ್ದವರು ಪೆಟ್ರೋಲ್ ಸುರಿದು ಮಂಗಳವಾರ ಮಧ್ಯಾಹ್ನ ಭೀರಕರವಾಗಿ ಹತ್ಯೆಗೈದಿದ್ದರು. ಈ ಹತ್ಯೆಯ ರೂವಾರಿ ಪೋಪಟ್ ಶಿಂಧೆಗೆ ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದು, ಆತನನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಂಧೆನ ಮಗ ಕುನಾಲ್ ಕೂಡ ಬಂಧಿತನಾಗಿದ್ದಾನೆ. ಶಿಂಧೆ ಕುಟುಂಬ ಹಲವಾರು ವರ್ಷಗಳಿಂದ ಪೆಟ್ರೋಲ್ ಕಾಳದಂಧೆಯಲ್ಲಿ ತೊಡಗಿದೆ.
ಸೋನಾವಾನೆ ಹತ್ಯೆಯನ್ನು ಪ್ರತಿಭಟಸಿ ಸರಕಾರಿ ನೌಕರರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಗುರುವಾರ ಕೂಡ ಕಚೇರಿಗೆ ಹಾಜರಾದನಂತರ ಪ್ರತಿಭಟನೆಯಲ್ಲಿ ತೊಡಗಲು ನಿರ್ಧರಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸೋನಾವಾನೆ ಕುಟುಂಬ ಆಗ್ರಹಿಸುತ್ತಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರಕಾರ, ತಪ್ಪಿಸತ್ಥರನ್ನು ಬಿಡುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದಾರೆ. ಸೋನಾವಾನೆ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ಘೋಷಿಸಲಾಗಿದ್ದು, ನಿವೃತ್ತಿ ವಯಸ್ಸಿನವರೆಗೆ ತಿಂಗಳ ವೇತನ ಕೂಡ ನೀಡುವು ವಾಗ್ದಾನ ನೀಡಿದೆ.












Click it and Unblock the Notifications