ಕಪ್ಪುಹಣ : ಹೆಸರು ಬಹಿರಂಗಕ್ಕೆ ಕೇಂದ್ರ ನಕಾರ

ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಣಬ್, ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರಲು ಮತ್ತು ಅಕ್ರಮವಾಗಿ ಸ್ವಿಸ್ ಬ್ಯಾಂಕಿಗೆ ಸೇರುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿದೆ ಎಂದು ವಿವರಿಸಿದರು. ಸ್ವಿಸ್ ಬ್ಯಾಂಕಿನಲ್ಲಿ ಅಂದಾಜು 500 ಬಿಲಿಯನ್ ನಿಂದ 1400 ಬಿಲಿಯನ್ ರುಪಾಯಿಯಷ್ಟು ಕಪ್ಪುಹಣವಿದೆ ಎಂದು ಅವರು ತಿಳಿಸಿದರು.
ವಿಡಿಯೋ : ಕಪ್ಪುಹಣದ ಬಗ್ಗೆ ಪ್ರಣಬ್ ಹೇಳಿದ್ದೇನು?
ಸ್ವಿಸ್ ಬ್ಯಾಂಕ್ ನಲ್ಲಿರುವ ಅಪಾರ ಪ್ರಮಾಣದ ಅಕ್ರಮ ಹಣವನ್ನು ಹಿಂತೆಗೆದುಕೊಂಡು ಬರಲು ಕೇಂದ್ರ ವಿಫಲವಾಗಿದ್ದಕ್ಕೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ತೆರಿಗೆ ತಪ್ಪಿಸುವುದಕ್ಕಾಗಿ ಕಪ್ಪು ಹಣ ಜಮಾವಣೆ ಮಾಡಿರುವುದು ಗುರುತರ ಅಪರಾಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ವಿರೋಧ ಪಕ್ಷಗಳಿಂದಲೂ ತೀವ್ರ ಟೀಕೆಗೆ ಗುರಿಯಾಗಿದೆ.
ಕೇಂದ್ರದ ಕ್ರಮಗಳನ್ನು ವಿವರಿಸಿದ ಪ್ರಣಬ್, ಕಪ್ಪು ಹಣ ಇಟ್ಟವರ ಹೆಸರು ಸಾರ್ವಜನಿಕವಾಗಿ ಹೇಳುವುದು ಸಾಧ್ಯವಿಲ್ಲ. ಆದರೆ, ಆ ಪಟ್ಟಿಯನ್ನು ಸುಪ್ರೀಂ ಕೋರ್ಟಿಗೆ ನೀಡಿದ್ದೇವೆ. ಈ ವಿಷಯದಲ್ಲಿ ಕಾನೂನಿನ ಚೌಕಟ್ಟು ಇಲ್ಲದಿದ್ದರೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದು ಕೂಡ ಕಷ್ಟಕರ. ಸಿಕ್ಕ ಮಾಹಿತಿಯನ್ನು ಗೌಪ್ಯವಾಗಿಡುವ ವಾಗ್ದಾನವನ್ನೂ ನೀಡಲಾಗಿದೆ ಎಂದರು. [ಕಪ್ಪು ಹಣ]












Click it and Unblock the Notifications