ಹಿರಿಯ ನಾಯಕರ ಭೇಟಿಗೆ ದೆಹಲಿಗೆ ಬಿಎಸ್ ವೈ

ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಲುಗಾಡುತ್ತಿರುವ ಕುರ್ಚಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರೀ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಪ್ರತಿಯುದ್ಧವನ್ನೇ ಸಾರಿರುವ ಯಡಿಯೂರಪ್ಪನವರು ಇಂದು ದೆಹಲಿಗೂ ತೆರಳಿ ರಾಷ್ಟ್ರನಾಯಕರಿಗೆ ವರದಿ ಸಲ್ಲಿಸಲಿದ್ದಾರೆ. ವರಿಷ್ಠರೊಂದಿಗೆ ಮುಂದಿನ ನಡೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಬೆಂಬಲಕ್ಕೆ ನಿಂತಿದ್ದರೂ ಎರಡೂವರೆ ವರ್ಷಗಳ ಆಡಳಿತ ಅವರಿಗೆ ಸಾಕಷ್ಟು ತಲೆನೋವು ತಂದಿದೆ. ಭೂಹಗರಣಗಳ ತನಿಖೆ ಮುಗಿದ ನಂತರ ಮೊಕದ್ದಮೆ ಹೂಡಲು ಅನುಮತಿ ನೀಡಬಹುದಾಗಿತ್ತು ಎಂದು ರಾಜ್ಯಪಾಲರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಬಳ್ಳಾರಿಯಲ್ಲಿ ಪ್ರತಿಭಟನೆ : ಶನಿವಾರ ಬಿಜೆಪಿ ಕರೆದಿದ್ದ ಬಂದ್ ವಿರೋಧಿಸಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಅಪಾರ ಹಾನಿ ಸಂಭವಿಸಿದ್ದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡಲೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ನಗರದ ರಾಯಲ್ ವೃತ್ತದ ಬಳಿ ಜಮಾಯಿಸಿ, ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಡಿ ರಸ್ತೆಯಲ್ಲಿ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. [ಯಡಿಯೂರಪ್ಪ]












Click it and Unblock the Notifications