ಬಿಬಿಎಂಪಿ ಸದಸ್ಯ ದಿವಾನ್ ಅಲಿ ಹತ್ಯೆ ಐವರ ಬಂಧನ

ಅಪ್ರೋಜ್, ಅಫ್ಜರ್, ಸಲೀಂ ಅಹ್ಮದ್, ನಜೀಂ ಮತ್ತು ಅಯಾಜ್ ಅವರನ್ನು ಬಂಧಿತರು. ದಯಾನಂದ್ ಸಾಗರ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದ ಅಫ್ಜರ್ ಕಾರಣಾಂತರಗಳಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ. ದಿವಾನ್ ಅಲಿಯ ಮನೆಯ ಸಮೀಪವೇ ವಾಸವಿದ್ದ ಆತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕೆಲ ದಿನಗಳ ಅಫ್ಜರ್ ಪ್ರೇಯಸಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ.
ಇದನ್ನು ನೋಡಿದ್ದ ದಿವಾನ್ ಅಲಿ ಮತ್ತು ಆತನ ಸಹಚರರು ಅಫ್ಜರ್ ಮನೆ ನುಗ್ಗಿ ಗಲಾಟೆ ಮಾಡಿದ್ದರು. ಅಲ್ಲದೇ ದಿವಾನ್ ಅಲಿ, ಅಫ್ಜರ್ ಗೆ ಬೆದರಿಕೆ ಹಾಕಿ ಮನೆ ಖಾಲಿ ಮಾಡಿಸಿದ್ದ. ಇದರಿಂದ ಕೋಪಗೊಂಡಿದ್ದ ಅಫ್ಜರ್ ಪ್ರತೀಕಾರವಾಗಿ ಇತರೆ ಆರೋಪಿಗಳು ಸೇರಿಕೊಂಡು ಅಲಿಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹೀನ್ ಕೈವಾಡ : ದಿವಾನ್ ಅಲಿ ಹತ್ಯೆ ಹಿಂದೆ ಮಾಹೀನ್ ಕೈವಾಡವಿದೆ. ದಿವಾನ್ ಅಲಿ ಕೊಲೆ ನಡೆದ ಸಮಯದಲ್ಲಿ ಮಾಹೀನ್ ಇದ್ದ ಎಂದು ಅಲಿ ಸಹೋದರ ಅಕ್ಬರ್ ಆರೋಪಿಸಿದ್ದಾರೆ. ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಕ್ಬರ್, ಪೊಲೀಸರು ಮಾಹೀನ್ ರಕ್ಷಣೆಗೆ ನಿಂತಿದ್ದಾರೆ. ಘಟನೆ ವೇಳೆ ಮಾಹೀನ್ ಸ್ಥಳದಲ್ಲಿದ್ದ ಎಂದು ಸ್ಥಳೀಯರ ಹೇಳಿದರೂ ಪೊಲೀಸರು ಆತನನ್ನು ಬಂಧಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.












Click it and Unblock the Notifications