ಅಲಿ ಕೊಲೆಯಲ್ಲಿ ಮಾಹಿಮ್ ಇಲ್ಲ, ಮತ್ತ್ಯಾರು...?

ದಿವಾನ್ ಅಲಿಯ ವೈರಿ ಮಾಹಿಮ್ ತಂಡದ ಸದಸ್ಯರು ಈ ಕೊಲೆ ಮಾಡಿರಬಹುದೆಂದು ಅಂದಾಜಿಸಲಾಗಿತ್ತು. ಆದರೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಉಂಟಾದ ಭಿನ್ನಭಿಪ್ರಾಯದಲ್ಲಿ ಇನ್ನೊಂದು ತಂಡ ಅಲಿಯನ್ನು ಮುಗಿಸಿ ಹಾಕಿದೆ ಎಂದು ಹೇಳಲಾಗಿದೆ. ಆರೋಪಿಗಳು ಇತ್ತೀಚೆಗೆ ಯಾರಬ್ ನಗರಕ್ಕೆ ಆಗಾಗ ಬರುತ್ತಿದ್ದರು. ಬೈಕ್ ನಲ್ಲಿ ಬರುತ್ತಿದ್ದ ಅವರು ಯಾರಬ್ ನಗರವನ್ನು ಸುತ್ತಾಡಿ ನಂತರ ಹಿಂದಿರುಗುತ್ತಿದ್ದರು.
ಆರೋಪಿಗಳಲ್ಲಿ ಕೆಲವರು ಈ ಹಿಂದೆ ಯಾರಬ್ ನಗರದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಈ ನಗರ ಬಿಟ್ಟು ಕಲ್ಲಹಳ್ಳಿಯಲ್ಲಿ ವಾಸಿಸುತ್ತಿದ್ದರು. ದಿವಾನ್ ಅಲಿ ಹತ್ಯೆ ಸಂಚು ರೂಪಿಸಿದ್ದ ಅವರು ಬೈಕ್ ಗಳಲ್ಲಿ ಬಂದು ಸುತ್ತಾಡಿ ಹೋಗುತ್ತಿದ್ದರು. ಕೊಲೆಯ ನಂತರ ಎಲ್ಲಿಂಗ ಹೇಗೆ ಪರಾರಿಯಾಗಬೇಕು ಎಂದು ಬಗ್ಗೆ ಸಿದ್ದತೆ ನಡೆಸಿಕೊಂಡಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ ಆರೋಪಿಗಳು ಅಲಿಯ ದಿನಚರಿಯನ್ನು ಸ್ಥಳೀಯರಿಂದ ಕಲೆ ಹಾಕುತ್ತಿದ್ದರು ಎಂಬ ಸುದ್ದಿಯೂ ಇದೆ.
ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಉಮರ್ ಮತ್ತು ಖಲೀಂ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಬ್ಬರ ವಿಚಾರಣೆ ನಡೆಸಿ ಮಾಹಿತಿ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ತನಿಖೆ ಶುರುವಾಗಿದೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಆರೋಪಿಗಳು ಪತ್ತೆಯಾಗಿದ್ದು, ಶೀಘ್ರದಲ್ಲಿ ಬಂಧಿಸುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರಿ ಬಿದರಿ ಹೇಳಿದ್ದಾರೆ. ಕಳೆದ ಭಾನುವಾರ ಮಧ್ಯಾಹ್ನ ದಿವಾನ್ ಅಲಿ ಅವರನ್ನು ಯಾರಬ್ ನಗರದಲ್ಲಿ ಕೊಲೆ ಮಾಡಲಾಗಿತ್ತು.(ಬಿಬಿಎಂಪಿ)












Click it and Unblock the Notifications