ಸುಶಿಕ್ಷಿತ ಅಪರಾಧಿಗಳನ್ನು ಬೆಂಡೆತ್ತಿ : ಎನ್ಆರ್ಎನ್ ಮೂರ್ತಿ

ಆಂತಾರಾಷ್ಟ್ರೀಯ ಬಿಸಿನೆಸ್ ಸ್ಕೂಲ್ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಹೆಸರಾಂತ ವ್ಯಕ್ತಿಗಳಿಂದ ಇಂಥ ಅಪರಾಧಗಳು ಜಾಸ್ತಿಯಾಗುತ್ತಿವೆ ಎಂದರು. ಅಂಥವರಿಗೆ ಯಾವುದೇ ಶಿಕ್ಷೆಯಾಗದಿರುವುದು ಕಳವಳಕಾರಿ ವಿಚಾರ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆ ನುಡಿದರು.
ಬೃಹತ್ ಪ್ರಮಾಣದ ಅಪರಾಧವೆಸಗಿದ್ದರೂ ಶಿಕ್ಷೆಗೆ ಒಳಪಡದೆ ಆರಾಮವಾಗಿರುವ ಅನೇಕ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಮಾಹಿತಿ ಮತ್ತು ವಸ್ತುಸ್ಥಿತಿಯ ಆಧಾರದ ಮೇಲೆ ತ್ವರಿತ ತನಿಖೆ ನಡೆಸಬೇಕು ಮತ್ತು ವ್ಯಕ್ತಿ ಎಷ್ಟೇ ಪ್ರತಿಷ್ಠಿತನಿರಲಿ ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅವರು ಪಡೆದ ದುರ್ಲಾಭಕ್ಕೆ ಅನುಗಣವಾಗಿ ಶಿಕ್ಷೆಯನ್ನೂ ನೀಡಬೇಕು ಎಂದು ನಾರಾಯಣ ಮೂರ್ತಿ ನುಡಿದರು.
ಉದ್ಯಮಿಗಳು ಯಾವ ರೀತಿ ಪರಿಶುದ್ಧ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂಬ ಪ್ರಶ್ನೆಗೆ, ಅವರ ವಿರುದ್ಧ ಯಾವುದೇ ಹಗರಣ ಇರಲಿ ಇಲ್ಲದಿರಲಿ, ವ್ಯಾಪಾರವನ್ನು ಅತ್ಯಂತ ಕಾನೂನುಬದ್ಧವಾಗಿ ಮತ್ತು ನೈತಿಕತೆಯಿಂದ ಮಾಡುತ್ತಿರಬೇಕು ಎಂದು ಉತ್ತರಿಸಿದರು. ಬೇರೆ ದಾರಿಯೇ ಇಲ್ಲ. ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸಲೇಬೇಕು. ಅಪರಾಧಕ್ಕೆ ಕ್ಷಮೆಯೆಂಬುದೇ ಇರಬಾರದು ಎಂದು ಮೂರ್ತಿ ಹೇಳಿದರು. [ನಾರಾಯಣ ಮೂರ್ತಿ]












Click it and Unblock the Notifications