ಸರ್ಕಾರದ ಕೈಗೆ ಖಾಸಗಿ ಶಾಲೆಗಳ ಮೂಗುದಾರ

Govt to look after CBSE, ICSE school
ಬೆಂಗಳೂರು ಜ 11: ಸಿಬಿಎಸ್ಇ, ಐಸಿಎಸ್ಇ ಪಠ್ಯ ಕ್ರಮದ ಅನುಸಾರ ಶಿಕ್ಷಣ ನೀಡುತ್ತಿರುವ ಅನುದಾನ ರಹಿತ ಖಾಸಗಿ ಶಾಲೆಗಳು ರಾಜ್ಯ ಶಿಕ್ಷಣ ಕಾಯ್ದೆ ಅನುಸರಿಸಬೇಕೆಂದು ನ್ಯಾ. ನಾಗಮೋಹನ್ ದಾಸ್ ಅವರ ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ಇದರಿಂದ ಸಿಬಿಎಸ್ಇ, ಐಸಿಎಸ್ಇ ಶಾಲೆಗಳು ರಾಜ್ಯ ಶಿಕ್ಷಣ ಕಾಯ್ದೆ ಅನುಸಾರ ಶುಲ್ಕ ನೀತಿ ಅಳವಡಿಸಿಕೊಂಡು ಆಡಳಿತ ನಡೆಸಬೇಕಾಗುತ್ತದೆ.

ಖಾಸಗಿ ಶಾಲೆಗಳ ದಿಢೀರ್ ಶುಲ್ಕ ಹೆಚ್ಚಳ ವಿರೋಧಿಸಿ ಪಾಲಕರ ನಾನ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ಕಾಯಿದಿಟ್ಟ ತೀರ್ಪನ್ನು ಹೈಕೋರ್ಟ್ ಪೀಠ ಪ್ರಕಟಿಸಿದೆ. ಶುಲ್ಕ ಹೆಚ್ಚಳ ಕಾನೂನು ಬದ್ದವಾಗಿಲ್ಲ ಎಂದು ಆದೇಶ ನೀಡಿ ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

* ಪಠ್ಯಕ್ರಮ ವಿಭಿನ್ನವಾಗಿದ್ದರೂ ರಾಜ್ಯ ಶಿಕ್ಷಣ ಕಾಯ್ದೆಯಿಂದ ವಿನಾಯತಿ ಇಲ್ಲ.
* ಖಾಸಗಿ ಶಾಲೆಗಳು ರಾಜ್ಯ ಶಿಕ್ಷಣ ಕಾಯ್ದೆಯ ಅನ್ವಯ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಮಾಡಬೇಕು
* ಸ್ವಾಯತ್ತ ಸಂಸ್ಥೆ ನಿಯಂತ್ರಣದಲ್ಲಿರದ ಖಾಸಗಿ ಶಾಲೆಗಳ ನಿಯಂತ್ರಣ ರಾಜ್ಯ ಸರ್ಕಾರದ ಹೊಣೆ
* ಶಾಲೆಗಳ ಪ್ರವೇಶ ಪರೀಕ್ಷೆ, ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ವಿಷಯದಲ್ಲಿ ರಾಜ್ಯ ಸರ್ಕಾರದ ತೀರ್ಮಾನವೇ ಅಂತಿಮ
* 1983ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ ರೂಪಿಸಲಾಗಿತ್ತು. ಆದರೆ, 1998ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಅ ಶಾಲೆಗಳನ್ನು ಕಾಯ್ದೆಯಿಂದ ಹೊರಗಿಡಲಾಗಿತ್ತು.

ಶುಲ್ಕ ನಿಗದಿ, ಸೀಟು ಹಂಚಿಕೆ ಮತ್ತು ಪ್ರವೇಶ ಪರೀಕ್ಷೆಗಳ ಕುರಿತು ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಖಾಸಗಿ ಸಂಸ್ಥೆಗಳಿಗೆ ಸರ್ಕಾರ ನೀಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ಪ್ಯಾರಾಶೋಟ್ ರೆಜುಮೆಂಟ್ ಶಾಲೆ, ಏರ್‌ಫೋರ್ಸ್ ಶಾಲೆ ಮತ್ತು ಪೋಷಕರ ಕಲ್ಯಾಣ ಒಕ್ಕೂಟ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. 2007ರಲ್ಲಿ ಕಾಯ್ದೆ ನಿಯಮಗಳ ಬಳಸಿ, ನಿರಪೇಕ್ಷಣಾ ಪತ್ರ ಪಡೆದ ಶಾಲೆಗಳು ಶೇ.130ರಷ್ಟು ಶುಲ್ಕವನ್ನು ಹೆಚ್ಚಿಸಿತು. ಅಲ್ಲದೆ ಶಿಕ್ಷರ ವರ್ಗಾವಣೆ, ಅಮಾನತು ಮತ್ತು ಸಂಬಳ ನಿಗದಿ ವಿಚಾರದಲ್ಲೂ ಮನಬಂದಂತೆ ನಡೆದುಕೊಂಡವು. [ಶಾಲೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+