ಪ್ರೀತಿಸಿದ ತಪ್ಪಿಗೆ ಪ್ರಾಣ ತೆತ್ತ ಯುವಕ
ಬೆಂಗಳೂರು,
ಜ. 10 : ತಂಗಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಕೋಪಗೊಂಡ ಅಣ್ಣ ಹಾಗೂ ಆತನ ಸ್ನೇಹಿತರು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕುಮಾರಸ್ವಾಮಿ ಲೇಔಟ್ ನಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. id="toptextpromo">ಜಗದೀಶ್(28)
ಕೊಲೆಗೀಡಾದ ಯುವಕ. ಕುಮಾರಸ್ವಾಮಿ ಲೇಔಟ್‌ನ ವೈಷ್ಣವಿ ನಗರದಲ್ಲಿ ಶನಿವಾರ ಮಧ್ಯರಾತ್ರಿ ಈ ಕೊಲೆ ನಡೆದಿದ್ದು, ಕೊಲೆಗೈದ ಆರೋಪಿಗಳಾದ ನರೇಂದ್ರ, ಸೆಂದಿಲ್, ಅಸ್ಲಂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿರುವ ಆರೋಪಿಗಳು ಮತ್ತು ಕೊಲೆಯಾದ ಜಗದೀಶ್ ಸ್ನೇಹಿತರಾಗಿದ್ದರು. ಆದರೆ, ನರೇಂದ್ರ ಎಂಬ ಸ್ನೇಹಿತನ ತಂಗಿಯನ್ನೇ ಜಗದೀಶ್ ಪ್ರೀತಿಸಿದ್ದ. ಇದು ಸ್ನೇಹಿತರಲ್ಲಿ ದ್ವೇಷ ಹುಟ್ಟುಕೊಳ್ಳಲು ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಾಕು
ತಾಯಿ ಹೊನ್ನಮ್ಮ(60) ಎಂಬುವವರ ಮನೆಯಲ್ಲಿ ಜಗದೀಶ್ ವಾಸವಾಗಿದ್ದು, ಕಳೆದ 6 ವರ್ಷಗಳಿಂದ ಆಕೆ ಸಾಕಿಕೊಂಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಮ್ಮ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.(ಕ್ರೈಂ)











Click it and Unblock the Notifications