• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಕಿಪೀಡಿಯ ಮುಕ್ತ ಚಿತ್ರ ಖಜಾನೆಗಾಗಿ ನಡಿಗೆ

By * ಮಲೆನಾಡಿಗ
|
ಬೆಂಗಳೂರಿನ ವಿಕಿಪೀಡಿಯ ಸಮುದಾಯ "ವಿಕಿಪೀಡಿಯದ ಹತ್ತನೇ ವಾರ್ಷಿಕೋತ್ಸ"ವನ್ನು ವಿನೂತನ ರೀತಿಯಿಂದ ಆಚರಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಇಂದು "Bangalore loves Wikipedia " ಎಂಬ ಸಂದೇಶ ವಾಕ್ಯದೊಂದಿಗೆ ಫೋಟೋ ವಾಕ್ ಸರಣಿಯನ್ನು ಆರಂಭಿಸಲಾಯಿತು. ಬೆಳ್ಳಂಬೆಳ್ಳಗೆ ಬೆಂಗಳೂರಿನ ಆಹ್ಲಾದಕರ ವಾತಾವರಣ ಹೇಗಿರುತ್ತದೆ ಎಂಬ ಚಿತ್ರಣವನ್ನು ಪ್ರಪಂಚಕ್ಕೆ ನೀಡುವುದು ಹಾಗೂ ಬೆಂಗಳೂರಿನ ಪ್ರಮುಖ ಐತಿಹಾಸಿಕ, ಪಾರಂಪರಿಕ ಕಟ್ಟಡಗಳ ಚಿತ್ರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತೆ ಮಾಡುವುದು ಇಂದಿನ ವಿಕಿ ಕಾಮನ್ಸ್ ಫೋಟೋ ವಾಕ್ ನ ಉದ್ದೇಶವಾಗಿತ್ತು.

ಏನಿದು ಫೋಟೋ ವಾಕ್ : ವಿಕಿಪೀಡಿಯದ ಮುಕ್ತ ಚಿತ್ರಕೋಶ ಸಂಗ್ರಹ ತಾಣ ವಿಕಿ ಕಾಮನ್ಸ್ ನಲ್ಲಿ ಚಿತ್ರಗಳನ್ನು ತುಂಬಿಸಿ ಮುಕ್ತವಾಗಿ ಬಳಕೆಗೆ ನೀಡುವುದು ಇದರ ಪ್ರಮುಖ ಉದ್ದೇಶ. ಇಂದು ಬೆಳಗ್ಗೆ ಸುಮಾರು 8.15ಕ್ಕೆ ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್ ನಿಂದ ಆರಂಭವಾದ ನಡಿಗೆ ಎರಡೂವರೆ ತಾಸಿನ ನಂತರ ಶೇಷಾದ್ರಿ ರಸ್ತೆಯಲ್ಲಿರುವ ಫ್ರೀಡಂ ಪಾರ್ಕ್ ಬಳಿ ಅಂತ್ಯವಾಯಿತು. ಮಾರ್ಗ ಮಧ್ಯದಲ್ಲಿ ಸಿಗುವ ಪ್ರಮುಖ ಪುರಾತನ, ಪಾರಂಪಾರಿಕ ಕಟ್ಟಡಗಳನ್ನು ಕೆಮೆರಾಗಳಲ್ಲಿ ಸೆರೆ ಹಿಡಿಯಲಾಯಿತು.

ಇಂದು ಸೆರೆ ಸಿಕ್ಕ ಚಿತ್ರಗಳು: ಟೌನ್ ಹಾಲ್, ಕಿತ್ತೂರು ಚೆನ್ನಮ್ಮ ಪ್ರತಿಮೆ, ಮೈ ಶುಗರ್ ಬಿಲ್ಡಿಂಗ್, ಕೆನೆರಾ ಬ್ಯಾಂಕ್, ಯೂನಿಟಿ ಬಿಲ್ಡಿಂಗ್, ಎಲ್ ಐಸಿ ಕಟ್ಟಡ, ಬಿಬಿಎಂಪಿಯ ಮೂರು ಕಟ್ಟಡಗಳು, ಕೆಂಪೇಗೌಡರ ಪ್ರತಿಮೆ, ಹಡ್ಸನ್ ಪ್ರಾರ್ಥನಾ ಮಂದಿರ, ಕಬ್ಬನ್ ಪಾರ್ಕ್, ಸೆಂಟ್ರಲ್ ಲೈಬ್ರರಿ, ಯುವಿಸಿಇ, ಎಸ್ ಜೆಪಿ.. .ಇತ್ಯಾದಿ

ಇದರಲ್ಲೇನಿದೆ ವಿಶೇಷ: ಇಂದು ಪಾಲ್ಗೊಂಡವರಲ್ಲಿ ಬಹುತೇಕ ಮಂದಿ ಐಟಿ ಕ್ಷೇತ್ರದ ವೃತ್ತಿಪರರು. ಫೋಟೋಗ್ರಾಫಿಯನ್ನು ಹವ್ಯಾಸ ಮಾಡಿಕೊಂಡವರೇ ಹೆಚ್ಚು. ಜನಕ್ಕೆ ಹೊಸ ಬಗೆಯಲ್ಲಿ ಏನಾದರೂ ನೆರವು ನೀಡಬೇಕು ಅದರಲ್ಲೂ ತಮಗೆ ತಿಳಿದಿರುವ ಕ್ಷೇತ್ರದ ಮೂಲಕ(ವೆಬ್ ವರ್ಲ್ಡ್ ಎಂದು ಓದಿಕೊಳ್ಳಬಹುದು) ನೀಡುವುದಾದರೆ ಇನ್ನೂ ಒಳ್ಳೆಯದು ಎಂಬ ಮನಸ್ಥಿತಿ ಇದ್ದವರೇ ಹೆಚ್ಚು. ಭಾನುವಾರ ಈ ಗುಂಪು ಬೆಂಗಳೂರಿನಲ್ಲು ಸುತ್ತಾಡಿ ತೆಗೆದ ಚಿತ್ರಗಳು ವಿಕಿ ಪುಟಗಳಲ್ಲಿ ಲಭ್ಯ. ಕಾಮನ್ಸ್ ನಲ್ಲಿನ ಫೋಟೋಗಳನ್ನು ಬಳಸಲು ಛಾಯಾಚಿತ್ರಕಾರರ ಅನುಮತಿ ಆಗತ್ಯ. ವಿಕಿಯಲ್ಲಿ ಫೋಟೋ ಹಾಕಿರುವ ಸದಸ್ಯರು ಸೂಚಿಸಿದಂತೆ ಕೃಪೆ ನೀಡಿ ಫೋಟೋಗಳನ್ನು ಬಳಸಬಹುದು. ಮಾಹಿತಿ ಪ್ರಿಯ ಕನ್ನಡ ಜನಸ್ತೋಮದ ಉಪಯೋಗಕ್ಕಾಗಿ ಸಮಾನ ಮನಸ್ಕರು ಮಾಡುತ್ತಿರುವ ಈ ಹಂಚಿಕೆ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ

ಬೇರೆ ದೇಶಗಳಲ್ಲಿ ವಿಕಿ ಕಾಮನ್ಸ್ ವಾಕ್ ನಲ್ಲಿ ಸಾವಿರಾರು ಜನ ಸೇರುವುದುಂಟು. ನಮ್ಮಲ್ಲಿ ಸುಮಾರು 15 ಜನ ಸೇರಿದ್ದೇವೆ ಎಂಬುದೇ ಸಂತೋಷ. ವೆಬ್ ಪ್ರಪಂಚದಲ್ಲಿ ಕನ್ನಡಕ್ಕೆ ಮಾನ್ಯತೆ ಇಲ್ಲ ಎಂದು ಎಲ್ಲರೂ ಹೇಳುತ್ತಿರುತ್ತಾರೆ ಆದರೆ, ವಿಕಿಪೀಡಿಯ ಬಳಸಿ ಕನ್ನಡದ ಲೇಖನಗಳ ಸಂಖ್ಯೆ ಹೆಚ್ಚಿಸಿದರೆ ಕನ್ನಡದ ಶಕ್ತಿ ಎಲ್ಲರಿಗೂ ತಿಳಿಯುತ್ತದೆ ಎಂದು ವಿಕಿಪೀಡಿಯ ಬೆಂಗಳೂರು ಸಮುದಾಯದ ಆಯೋಜಕ ಹರಿ ಪ್ರಸಾದ್ ನಾಡಿಗ್ ಹೇಳಿದರು.

ಮುಂದಿನ ಫೋಟೋ ವಾಕ್ ಸ್ಥಳ ಬಸವನಗುಡಿ. ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಅದಕ್ಕೂ ಮುನ್ನ ಜ. 15ರ ವಿಕಿಪೀಡಿಯದ 10ನೇ ವಾರ್ಷಿಕೋತ್ಸವದಲ್ಲಿ ಆಸಕ್ತರು ಪಾಲ್ಗೊಳ್ಳಬಹುದು. ಅಭಿಪ್ರಾಯ ಹಂಚಿಕೆಗೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ದಟ್ಸ್ ಕನ್ನಡ ತಾಣವನ್ನು ನೋಡುತ್ತಿರಿ. [ಬೆಂಗಳೂರು]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಒನ್ ಇಂಡಿಯಾ ಸುದ್ದಿಗಳುView All

English summary
Bangalore is one of the active hubs for Wikipedians in India. As a run-up to 10th Anniversary of Wikipedia on 15th Jan in Bangalore many activities are oraganised. Bangalore loves Wikipedia (Wikipedia Commons Walk) was organised today(Jan.9). It is a series of photo walks to capture various monuments of Bangalore and thereby contributing photos to the Wikimedia Commons, Wikipedia.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more