ಹಿಂದು ಭಯೋತ್ಪಾದನೆ ನಿಜ; ಆರ್ಎಸ್ಎಸ್ ಮುಖಂಡ
ನವದೆಹಲಿ,
ಜ. 8: ಇಸ್ಲಾಮಿಕ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಹಿಂದು ಭಯೋತ್ಪಾದನೆ ಆರಂಭಗೊಂಡಿದೆ. ಸಂಕಟಮೋಚನ ದೇಗುಲ ಸೇರಿದಂತೆ ವಿವಿಧ ಹಿಂದು ದೇವಾಲಯಗಳ ಮೇಲಿನ ದಾಳಿಗೆ ಪ್ರತಿಕಾರವಾಗಿ ಮುಸ್ಲಿಂ ಮಸೀದಿಗಳ ಮೇಲೆ ದಾಳಿ ಮಾಡಲಾಗಿದೆ. ಮಾಲೇಗಾಂವ್, ಸಮಜೋತ ಎಕ್ಸ್‌ಪ್ರೆಸ್, ಅಜ್ಮೀರ್ ದರ್ಗಾ ಹಾಗೂ ಮೆಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇತರ ಹಿಂದೂ ಕಾರ್ಯಕರ್ತರೊಡನೆ ತಾವೂ ಭಾಗಿಯಾಗಿದ್ದಾಗಿ ಮ್ಯಾಜಿಸ್ಟ್ರೇಟರೊಬ್ಬರ ಮುಂದೆ ಬಂಧಿತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ಸ್ವಾಮಿ ಆಸೀಮಾನಂದ ತಪ್ಪೊಪ್ಪಿಕೊಂಡಿದ್ದಾರೆ. id="toptextpromo">ಆಸೀಮಾನಂದರ
ತಪ್ಪೊಪ್ಪಿಗೆಯಿಂದ ಹಿಂದು ಉಗ್ರರ ಜಾಲ ಕಾರ್ಯನಿರತವಾಗಿರುವುದು ಖಚಿತವಾಗಿದೆ. ಹಾಗೆಯೇ ಅವರ ಸಹಿ ಇರುವ 42 ಪುಟಗಳ ತಪ್ಪೊಪ್ಪಿಗೆ ಹೇಳಿಕೆ ತಮ್ಮ ಬಳಿಯಿದೆ. ಮುಸ್ಲಿಮರನ್ನು ಗುರಿಯಾಗಿಸಿ ಧಾರ್ಮಿಕ ಸ್ಥಳಗಳಲ್ಲಿ ನಡೆಸುತ್ತಿರುವ ಭಯೋತ್ಪಾದನಾ ದಾಳಿ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಈ ತಪ್ಪೊಪಿಗೆ ಹೇಳಿಕೆ ಬಹಳ ಮುಖ್ಯವಾಗಿದೆ ಎಂದು 'ತೆಹಲ್ಕಾ' ನಿಯತಕಾಲಿಕ ಹೇಳಿಕೊಂಡಿದೆ. id='are-slot-1' class='oiad oi-axt oiadv'> id='top-searched-articles'>ಹಿಂದಿಯಲ್ಲಿ
ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಸ್ವಾಮಿ, ಅಭಿನವ್ ಭಾರತ್ ಸಂಘಟನೆ ಮತ್ತು ಆರ್ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಕೂಡಾ ಇದರಲ್ಲಿ ಪ್ರಮುಖ ಸೂತ್ರಧಾರಿ. 2005ರಲ್ಲಿ ಗುಜರಾತ್‌ನಲ್ಲಿರುವ ಆಸೀಮಾನಂದರ 'ಶಬರಿಧಾಮ" ಆಶ್ರಮಕ್ಕೆ ಹಲವು ಉನ್ನತ ಆರ್ ಎಸ್‌ಎಸ್ ಕಾರ್ಯಕರ್ತರೊಡನೆ ಭೇಟಿ ನೀಡಿದ ಇಂದ್ರೇಶ್, ಭಯೋತ್ಪಾದನಾ ದಾಳಿಗೆ ಈಗ ಹತ್ಯೆಗೀಡಾಗಿರುವ ಆರ್ ಎಸ್‌ಎಸ್ ನಾಯಕ ಸುನೀಲ್ ಜೋಷಿ ಅವರನ್ನು ನಿಯೋಜಿಸಿರುವುದಾಗಿ ಮತ್ತು ಅವರಿಗೆ ಬೇಕಾದ ಹಣಕಾಸು ಸೇರಿ ಎಲ್ಲ ನೆರವು ನೀಡುವ ಭರವಸೆ ಇಂದ್ರೇಶ್ ನೀಡಿದ್ದಾಗಿ ಸ್ವಾಮಿ ಹೇಳಿರುವುದಾಗಿ 'ತೆಹೆಲ್ಕಾ' ಪತ್ರಿಕೆ ಹೇಳಿದೆ.











Click it and Unblock the Notifications